ಭೀಕರ ಅಪಘಾತ: ಪ್ರಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕ್ಯಾಲಿಫೋರ್ನಿಯಾ(24-02-2021): ಪ್ರಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ (45) ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ  ಟೈಗರ್​ ವುಡ್ಸ್ ಕಾರು ಅಪಘಾತವಾಗಿದೆ. ಈ ವೇಳೆ ಕಾರಿನಲ್ಲಿ ಓರ್ವನೇ ಇದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅಪಘಾತದ ಬಗ್ಗೆ ಲಾಸ್​ ಏಂಜಲಿಸ್​ ಕೌಂಟಿ ಶೆರಿಫ್ಸ್​ ಇಲಾಖೆ ಮಾಹಿತಿ ನೀಡಿದ್ದು, ಟೈಗರ್​ ವುಡ್ಸ್ ಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದೆ.

ವುಡ್ಸ್ ಅವರು ಕಾರು ಅಪಘಾತಕ್ಕೆ ಈಡಾಗಿರುವುದು ಇದು ಮೂರನೇ ಬಾರಿಯಾಗಿದೆ. ಈ ಮೊದಲು 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್​ಯುವಿ ಕಾರು ಮರಕ್ಕೆ ಅಪ್ಪಳಿಸಿ ವುಡ್ಸ್ ಗಂಭೀರವಾಗಿ ಗಾಯಗೊಂಡಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು