ಬೆಂಗಳೂರು (09-12-2020):ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಗೋಹತ್ಯಾ ನಿಷೇಧ ಮಸೂದೆಯನ್ನು ಮಂಡಿಸಿದ್ದಾರೆ.
ಮಸೂದೆ ಮಂಡನೆಗೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಇದರ ಮಧ್ಯೆಯೂ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡಿದೆ.
ಮಸೂದೆಯನ್ನು ವಿರೋಧಿಸಿ ಸದನದ ಬಾವಿಗೆ ಇಳಿದು, ಕಾಂಗ್ರೆಸ್, ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದ್ದರು.
ಮಸೂದೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿದ್ದು, ಗದ್ದಲ ಗಲಾಟೆ ಮಧ್ಯೆ ಗೋಹತ್ಯಾ ನಿಷೇಧದ ವಿಧೇಯಕ ಸದನದಲ್ಲಿ ಅಂಗೀಕಾರವಾಗಿದೆ.