ಅಪಾಯದಲ್ಲಿ ಮಾನವ ಸೇರಿದಂತೆ ಜೀವ ರಾಶಿಗಳು! ಬೆಚ್ಚಿಬೀಳಿಸುವ ಸಂಶೋಧನಾ ವರದಿ ಬಹಿರಂಗ

earth
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(27-01-2021): ಪೋಲಾರ್ ರೀಜನ್ ನಲ್ಲಿನ ಮಂಜು ಕರಗುತ್ತಿದೆ ಮತ್ತು ಅದು ಭೂಮಿಯ ಮೇಲಿನ ನೀರಿನ ಮಟ್ಟದಲ್ಲಿನ ಏರಿಕೆಗೆ ಕಾರಣವಾಗಿದೆ ಎಂದು ನಾವು ಕೇಳುತ್ತಿದ್ದೇವೆ. ಇದು ಭವಿಷ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ಜೀವನಕ್ಕೆ ಬದಲಾಯಿಸಲಾಗದ ಹಾನಿಗೆ ಕಾರಣವಾಗುತ್ತದೆ.

1994 ಮತ್ತು 2017 ರ ನಡುವೆ ನಮ್ಮ ಗ್ರಹದಿಂದ ಸುಮಾರು 28 ಟ್ರಿಲಿಯನ್ ಟನ್ ಹಿಮ ಕರಗಿದೆ ಎಂಬ ಬೆಚ್ಚಿಬೀಳಿಸುವ ಅಂಶವನ್ನು ಇತ್ತೀಚಿನ ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.

28 ಟ್ರಿಲಿಯನ್ ಟನ್ ಎಂದರೆ ಹಿಮವು ಇಡೀ ಯುನೈಟೆಡ್ ಕಿಂಗ್‌ಡಮ್ ನ್ನು ಸುಲಭವಾಗಿ ಆವರಿಸುವಷ್ಟಿದೆ. ಲೀಡ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ಈ ಅಂಶ ಬಹಿರಂಗವಾಗಿದೆ.  ನಮ್ಮ ಗ್ರಹದ ಸುತ್ತಲಿನ ಉಪಗ್ರಹಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಹಿಮದ ಕರಗುವಿಕೆಯ ಜಾಗತಿಕ ಸಮೀಕ್ಷೆಯನ್ನು ಮಾಡಲಾಗಿದೆ.

2,15,000 ಪರ್ವತ, ಹಿಮನದಿಗಳು, ಅಂಟಾರ್ಕ್ಟಿಕಾದ ಸುತ್ತಲೂ ತೇಲುತ್ತಿರುವ ಮಂಜುಗಡ್ಡೆ, ಗ್ರೀನ್‌ಲ್ಯಾಂಡ್‌ನ ಧ್ರುವೀಯ ಹಿಮಪದರಗಳು ಮತ್ತು ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ಮತ್ತು ದಕ್ಷಿಣ ಸಾಗರಗಳಲ್ಲಿ ಸಮುದ್ರದಗಳಲ್ಲಿ ಹಿಮದ ತೇಲುವಿಕೆಯನ್ನು ಸಂಶೋಧಕರು ನೋಡಿದ್ದಾರೆ. 23 ವರ್ಷಗಳ ಅವಧಿಯಲ್ಲಿ ಮಂಜು ಕರಗುವಿಕೆಯ ವಾರ್ಷಿಕ ದರವು ಶೇಕಡಾ 65 ಕ್ಕಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು