ಗ್ಲೋಬಲ್ ಸಿಟಿ ಎಂದು ಘೋಷಿಸಿದ ಒಂದು ವಾರದಲ್ಲೇ ಪ್ರವಾಹಕ್ಕೆ ಮುಳುಗಿದ ಸಿಟಿ| ಈ ಅನಾಹುತಕ್ಕೆ ಕಾರಣ ಏನು?

globel city
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್ (16-10-2020): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೈದರಾಬಾದ್ ಅನ್ನು ‘ಜಾಗತಿಕ ನಗರ’ ಎಂದು ಹೆಸರಿಸಿದ್ದಾರೆ. ಇದೇ ಹೈದರಾಬಾದ್ ಈ ವಾರದ ಆರಂಭದಲ್ಲಿ ಪ್ರವಾಹಕ್ಕೆ ತುತ್ತಾಗಿತ್ತು ಮತ್ತು ಪ್ರಮುಖ ರಸ್ತೆಗಳು ಕುಸಿದು ನಂತರ ಇತರ ಭಾಗಗಳಿಂದ ಸಂಪರ್ಕವನ್ನೇ ಕಡಿದುಕೊಂಡಿದೆ. ನಗರೀಕರಣದ ಕಳಪೆ ನಗರ ಯೋಜನೆ, ಅವಾಸ್ತವ ಒಳಚರಂಡಿ ವ್ಯವಸ್ಥೆ ಮತ್ತು ನದಿ, ಬಹು ಹೊಳೆಗಳು ಮತ್ತು ನೀರು-ಸಂಗ್ರಹ ಟ್ಯಾಂಕ್‌ಗಳ ಕರುಣಾಜನಕ ಸ್ಥಿತಿಯಿಂದ ಪ್ರವಾಹಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಹೈದರಾಬಾದ್‌ನ ಹೆಚ್ಚಿನ ಭಾಗಗಳು ಪ್ರವಾಹದ ನಂತರ ಎರಡು ದಿನಗಳ ಕಾಲ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಳೆದುಕೊಂಡಿವೆ. ರಾಜ್ಯ ಸರ್ಕಾರ ಈಗಾಗಲೇ 5,000 ಕೋಟಿ ರೂ. ನಷ್ಟವಾಗಿದೆ ಎಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಗುರುವಾರ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ಕೆಸಿಆರ್ ಕೇಂದ್ರದಿಂದ 1,350 ಕೋಟಿ ರೂ.ನೀಡುವಂತೆ ಆಗ್ರಹಿಸಿದ್ದಾರೆ.

ಅಧಿಕೃತ ಅಂಕಿಅಂಶಗಳು ಇನ್ನೂ ಲಭ್ಯವಿಲ್ಲದಿದ್ದರೂ, ಪ್ರವಾಹಗ ಈಗಾಗಲೇ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿವೆ ಎಂದು ವರದಿಗಳು ಸೂಚಿಸುತ್ತವೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹದುಲ್ ಮುಸ್ಲೀಮೀನ್ ನಾಯಕ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಅ.14 ರಂದು 9 ಜನರ ಸಾವಿನ ಕುರಿತು ಟ್ವೀಟ್ ಮಾಡಿದ್ದರು.

ಹೈದರಾಬಾದ್ ನಗರದ ಕೆಲವು ಭಾಗಗಳಲ್ಲಿ 24 ಗಂಟೆಗಳಲ್ಲಿ 32 ಸೆಂ.ಮೀ ಮಳೆಯಾಗಿದೆ. ಇದು ಶತಮಾನದಲ್ಲೇ ಬಿದ್ದ ಅಧಿಕ ಮಳೆಯಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು