ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಹಿಂದೆ ಓರ್ವ ಮಾಟಗಾರ!

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರಪ್ರದೇಶ(17-11-2020):  ಉತ್ತರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದ ಆರು ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ, ಕೊಲೆ ಮಾಡಲಾಗಿದೆ ಮತ್ತು ಆಕೆಯ ಶ್ವಾಸಕೋಶವನ್ನು ಕೊಲೆಗಾರರು ಕಿತ್ತು ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದರ ಹಿಂದೆ ಮಾಟಗಾರನೋರ್ವನಿದ್ದು, ಆತನಿಗೆ ಮಕ್ಕಳಾಗಿಲ್ಲ ಎಂದು ವಶೀಕರಣ ಮಾಡಲು ಶ್ವಾಸಕೋಶ ಬೇಕಿತ್ತು. ಇದಕ್ಕಾಗಿ ಕೃತ್ಯ ನಡೆದಿದೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.

ವಶೀಕರಣ ಮಾಡಲು ಬಾಲಕಿಯ ಶ್ವಾಸಕೋಶವನ್ನು ತೆಗೆದುಹಾಕಲಾಗಿದೆ. ಘಟಾಂಪುರ ಪ್ರದೇಶದಿಂದ ದೀಪಾವಳಿಯ ರಾತ್ರಿ ಬಾಲಕಿ ನಾಪತ್ತೆಯಾಗಿದ್ದಳು.

ಅಂಕುಲ್ ಕುರಿಲ್ (20) ಮತ್ತು ಬೀರನ್ (31) ಬಂಧಿತ ಆರೋಪಿಗಳು.ಇವರು ಬಾಲಕಿಯ ಶ್ವಾಸಕೋಶವನ್ನು ಕಿತ್ತು ವಶೀಕರಣ ಮಾಡಲು ಪರಶುರಾಮ್ ಕುರಿಲ್ ಎಂಬಾತನಿಗೆ ತಲುಪಿಸಿದ್ದಾರೆ ಎಂದು ಎಎಸ್ಪಿ ಬ್ರಜೇಶ್ ತಿಳಿಸಿದ್ದಾರೆ.

ಮುಖ್ಯ ಆರೋಪಿ ಪಾರಶುರಾಮ್‌ನನ್ನು ಸೋಮವಾರ ಬಂಧಿಸಲಾಗಿದ್ದು, ಆತನ ಪತ್ನಿಯನ್ನು ಕೂಡ ಬಂಧಿಸಲಾಗಿದೆ.

ಪರಶುರಾಮ್ ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದನು, ಆದರೆ ತೀವ್ರವಾದ ವಿಚಾರಣೆ ಬಳಿಕ ಅಪರಾಧವನ್ನು ಒಪ್ಪಿಕೊಂಡನು ಎಂದು ಎಎಸ್ಪಿ ಹೇಳಿದ್ದಾರೆ.

ಪರಶುರಾಮ್ 1999 ರಲ್ಲಿ ವಿವಾಹವಾಗಿದ್ದ ಆದರೆ ಇದುವರೆಗೆ ಮಕ್ಕಳಾಗಿಲ್ಲ. ಇದಕ್ಕಾಗಿ ಮಂತ್ರ ಮಾಡಲು ಬಾಲಕಿಯ ಶವವನ್ನು ತರುವಂತೆ ಸೋದರಳಿಯ ಅಂಕುಲ್ ಮತ್ತು ಅವನ ಸ್ನೇಹಿತ ಬೀರನ್‌ನನ್ನು ಮನವೊಲಿಸಿದ್ದಾನೆ.

ಅತಿಯಾದ ಕುಡಿತದಲ್ಲಿದ್ದ ಅಂಕುಲ್ ಮತ್ತು ಬೀರನ್ ಶನಿವಾರ ರಾತ್ರಿ ಭದ್ರಾಸ್ ಗ್ರಾಮದಲ್ಲಿರುವ ಮನೆಯಿಂದ ಪಟಾಕಿ ಖರೀದಿಸಲು ತೆರಳುತ್ತಿದ್ದಾಗ ಬಾಲಕಿಯನ್ನು ಅಪಹರಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ದುಷ್ಕರ್ಮಿಗಳು ಹತ್ತಿರದ ಕಾಡಿಗೆ ಕರೆದೊಯ್ದರು, ಅಲ್ಲಿ ಅವರು ಬಾಲಕಿಯನ್ನು ಕೊಲ್ಲುವ ಮೊದಲು ಅತ್ಯಾಚಾರ ಮಾಡಿದ್ದರು.

ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು