ಘಾಜಿಯಾಬಾದ್; ಭಾರೀ ಅಗ್ನಿ ಅವಘಡ, ಅಪಾಯದಲ್ಲಿ 200 ಸ್ಲಂ-ಪ್ರದೇಶಗಳು, ಜನರ ಬಿರುಸಿನ ಸ್ಥಳಾಂತರ

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಘಾಜಿಯಾಬಾದ್(04-11-2020): ಭಾರೀ ಅಗ್ನಿ ಅವಘಡ ಸಂಭವಿಸಿ 200 ಸ್ಲಂ-ಪ್ರದೇಶಗಳು ಘಾಜಿಯಾಬಾದ್ ನ ಸಾಹಿಬಾ ಬಾದ್‌ ಭೂಪುರ ಕೃಷ್ಣ ವಿಹಾರ್ ಪ್ರದೇಶದಲ್ಲಿ ಅಪಾಯದಲ್ಲಿದೆ.

ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ದೌಡಾಯಿಸಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಥಳದಲ್ಲಿ ಇನ್ನೂ ಕೂಡ 30 ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂದು ಪೊಲೀಸರು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು