ಅಬುಧಾಬಿ (31-10-2020): ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ ಮನ್ ಗೇಯ್ಲ್ ಶತಕದ ಸಮೀಪದಲ್ಲಿ ಔಟಾಗಿದ್ದಕ್ಕೆ ಹತಾಶೆಗೊಂಡು ಬ್ಯಾಟನ್ನು ನೆಲಕ್ಕೆ ಬಡಿದು ಬೇಸರ ವ್ಯಕ್ತಪಡಿಸಿದ್ದರು.
ಐಪಿಎಲ್ ಇತಿಹಾಸದಲ್ಲೇ ಗೇಯ್ಲ್ ಇಂತಹ ಅಸಭ್ಯ ತೋರಿದ್ದು, ಇದೇ ಮೊದಲು ಎನ್ನಲಾಗಿದೆ.
ಮೈದಾನದಲ್ಲಿ ಸಭ್ಯ ತೋರಿದ ಗೇಯ್ಲ್ ಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡ 10ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ನ್ನು ಕ್ರಿಸ್ ಗೇಯ್ಲ್ ಒಪ್ಪಿಕೊಂಡಿದ್ದರು.
ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.
ವಿಡಿಯೋ ವೀಕ್ಷಿಸಿ..ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಆಗಿ…