ನವದೆಹಲಿ (16-10-2020): ನ.1ರಿಂದ ಎಲ್ಪಿಜಿ ಸಿಲಿಂಡರ್ಗಳ ಮನೆ-ಮನೆ ವಿತರಣೆಗೆ ಒಟಿಪಿ ಅಥವಾ ಒನ್-ಟೈಮ್ ಪಾಸ್ವರ್ಡ್ ಕಡ್ಡಾಯವಾಗಿದೆ.
ನಿಮ್ಮ ಮನೆಬಾಗಿಲಿನಲ್ಲಿ ಅಡುಗೆ ಅನಿಲ ಸಿಲಿಂಡರ್ಗಳನ್ನು ಸ್ವೀಕರಿಸಲು ಒಟಿಪಿ ಅಗತ್ಯವಿದೆ. ಸಿಲಿಂಡರ್ ಹೋಮ್ ಡೆಲಿವರಿಗಾಗಿ ಗ್ರಾಹಕರ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿ ನೋಂದಾಯಿಸಬೇಕು.
ನಾವು ಗ್ಯಾಸ್ ಸಿಲಿಂಡರನ್ನು ಬುಕ್ ಮಾಡಿದಾಗ, ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಕೋಡ್ ಬರುತ್ತದೆ. ವಿತರಕರಿಗೆ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಸ್ವೀಕರಿಸುವ ಕೋಡ್ ನ್ನು ತೋರಿಸಬೇಕಾಗುತ್ತದೆ. ಬೇರೆ ವ್ಯಕ್ತಿಗೆ ವಿತರಣೆಯನ್ನು ಮಾಡಲಾಗುವುದಿಲ್ಲ ಎಂದು ದೃಢಪಡಿಸಬೇಕಾಗುತ್ತದೆ.
ತೈಲ ಮಧ್ಯವರ್ತಿಗಳು ಸಿಲಿಂಡರ್ಗಳ ಕಳ್ಳತನವನ್ನು ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ.