1 ಕೋಟಿ ರೂ. ಬೆಲೆಯ ಸ್ಟೀಲ್​ ಗ್ಯಾಸ್ ಸ್ಟವ್!

gas stav
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರಿನಲ್ಲಿ(16-10-2020): ಸ್ಟೀಲ್​ ಗ್ಯಾಸ್ ಸ್ಟವ್ ಬೆಲೆ 1 ಕೋಟಿ ಇದೆ ಎಂದರೆ ನೀವು ನಂಬುತ್ತೀರಾ? ಇಲ್ವಲ್ಲ. ಇಂತದ್ದೊಂದು ಬೆಲೆ ಬಾಳುವ ಸ್ಟೀಲ್ ಗ್ಯಾಸ್ ಸ್ಟವ್ ವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸ್ಟೀಲ್​ನೆಸ್ ಸ್ಟವ್ ನ್ನು ಆಸ್ಟ್ರೇಲಿಯಾಕ್ಕೆ ರವಾನಿಸಲು ಬೆಂಗಳೂರು ಅಂತಾರಾಷ್ಟ್ರೀಯ ಕೊರಿಯರ್ ಸೆಂಟರ್ ತಲುಪಿತ್ತು. ಈ ಬಗ್ಗೆ ಖಚಿತ ಮಾಹಿತಿಯೊಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿತ್ತು. ಕೂಡಲೆ ಕಾರ್ಯಪ್ರವೃತ್ತರಾದ ಕಸ್ಟಮ್ಸ್​ನ ಗುಪ್ತಚರ ವಿಭಾಗದ ಅಧಿಕಾರಿಗಳು ಕೊರಿಯರ್ ಸೆಂಟರ್​ಗೆ ದಾಳಿ ನಡೆಸಿ, ಸ್ಟೀಲ್ ಗ್ಯಾಸ್ ಸ್ಟವ್ ನ್ನು ವಶಪಡಿಸಿಕೊಂಡಿದ್ದಾರೆ.

 ಸ್ಟವ್ ನ್ನು ವಶಕ್ಕೆ ಪಡೆಡು ತನಿಖೆ ನಡೆಸಿದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಸ್ಟವ್ ನ ಕಾಲಿನಲ್ಲಿ ಬಿಳಿ ಬಣ್ಣದ ಪೌಡರಿನ ಪ್ಲಾಸ್ಟಿಕ್ ಕಟ್ಟಿನಲ್ಲಿ ಎಫೆಡ್ರೇನ್ ಇತ್ತು. ಸರಿಸುಮಾರು 1983 ಗ್ರಾಂ ತೂಕವಿತ್ತು. ಕಸ್ಟಮ್ಸ್ ಅಧಿಕಾರಿಗಳು ಅದನ್ನು ಕೂಡಲೇ ಜಪ್ತಿ ಮಾಡಿಕೊಂಡಿದ್ದಾರೆ. ಅದರ ಮೌಲ್ಯ ಅಂದಾಜು 79 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು