ಯುವ ಜನಾಂಗಕ್ಕೆ ಗಾಂಧೀಜಿಯವರ ತತ್ವ ಸಿದ್ಧಾಂತ, ವಿಚಾರಧಾರೆಗಳು ಪ್ರಾಯೋಗಿಕವಾಗಿ ದೊರಕಬೇಕಾಗಿದೆ

gandhji
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಾತ್ಮಾ ಗಾಂಧೀಜಿಯವರ ವೈಯುಕ್ತಿಕ ಪರಿಚಯ:

ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ 2, 1869 ರಂದು ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ.  ತಂದೆ ಕರಮ್ ಚಂದ್ ಗಾಂಧಿ ಮತ್ತು ತಾಯಿ ಪುತಲೀಬಾಯಿ. ಗಾಂಧೀಜಿಯವರು ಕಸ್ತೂರ್ ಬಾರನ್ನು ವಿವಾಹವಾದರು. ಹರಿಲಾಲ್ ಗಾಂಧಿ,ಮಣಿಲಾಲ್ ಗಾಂಧಿ,ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿಯವರು ಗಾಂಧೀಜಿಯವರ ಮಕ್ಕಳಾಗಿರುತ್ತಾರೆ.

 

ದಕ್ಷಿಣ ಆಫ್ರಿಕಾದಿಂದಲೇ ಗಾಂಧೀಜಿಯವರ ಮೊದಲ ಚಳುವಳಿ ಪ್ರಾರಂಭಗೊಂಡಿತ್ತು: 1893ರಲ್ಲಿ ಗಾಂಧೀಜಿಯವರು ಪ್ರಿಟೋರಿಯಾಗೆ(ದಕ್ಷಿಣ ಆಫ್ರಿಕಾ) ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಬಿಳಿಯನೊಬ್ಬನು ದೂರಿನಂತೆ ಕರಿಯನೆಂದು ಗಾಂಧೀಜಿಯವರನ್ನು ರೈಲಿನಿಂದ ಹೊರಹಾಕಲಾಯ್ತು.ಬ್ರಿಟೀಷರ ವರ್ಣಬೇಧ ನೀತಿಯಿಂದ ಬೇಸರಗೊಂಡ ಗಾಂಧೀಜಿಯವರು, ದಕ್ಷಿಣ ಆಫ್ರಿಕಾ ದಲ್ಲಿ ಬ್ರಿಟೀಷರ ವಿರುದ್ಧ ಚಳವಳಿಯನ್ನು ಆರಂಭಿಸಿದರು.ಸತ್ಯ ಮತ್ತು ಅಹಿಂಸೆ ಎಂಬ ಎರಡು ಪ್ರಮುಖ ಮಂತ್ರಗಳನ್ನು  ಮಹಾತ್ಮ ಗಾಂಧೀಜಿ ಯವರು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಗಾಂಧೀಜಿಯವರು ಹೋರಾಟ ನಡೆಸಿದರು:

ಉಪ್ಪಿನ ಸತ್ಯಾಗ್ರಹ,ಅಸಹಕಾರ ಚಳುವಳಿ,ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಮೂಮೆಂಟ್) ನಂತಹ ಚಳುವಳಿಗಳಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದರು.1920ರಂದು ಜಲಿಯಲ್ ವಾಲಾ ಬಾಗ್(ಅಮ್ರತ್ ಸರ) ದಲ್ಲಿ ನಡೆದ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಇನ್ನಷ್ಟು ತೀವ್ರಗೊಂಡಿತು.ಬ್ರಿಟೀಷರ ವಿರುದ್ಧ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರಮುಖ ನಾಯಕರಾಗಿದ್ದರು.

ಉತ್ತಮ ಬರಹಗಾರ ಮತ್ತು ವಾಗ್ಮಿಯಾಗಿದ್ದರು ಬಾಪೂಜಿ:

ಮಹಾತ್ಮಾ ಗಾಂಧೀಜಿ ಯವರು ಉತ್ತಮ ಲೇಖಕ ಮತ್ತು ವಾಗ್ಮಿಯಾಗಿದ್ದರು.ದಕ್ಷಿಣ ಆಪ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಗುಜರಾತಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮಾಸಪತ್ರಿಕೆಗಳು ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಸಂಪಾದಕರಾಗಿದ್ದರು.ಹಲವಾರು ಪುಸ್ತಕಗಳು ಮತ್ತು ಆತ್ಮಚರಿತ್ರೆಯನ್ನು ಬರೆದಿದ್ದಾರೆ.

ಗಾಂಧೀಜಿಯವರು ಆಂದೋಲನಗಳಿಗೆ ಸ್ಪೂರ್ತಿಯಾಗಿದ್ದರು:

ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟೀಷರ ವಿರುದ್ಧ ಅಹಿಂಸಾ ಮತ್ತು ಸತ್ಯಾಗ್ರಹದ ಪಥದಲ್ಲಿ ಹೋರಾಟ ನಡೆಸಿದರು.ಗಾಂಧೀಜಿಯವರ ಅಹಿಂಸಾ ಹೋರಾಟಗಳು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಸಹಾಯವಾಯಿತು.ಗಾಂಧೀಜಿಯವರ  ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ಹೋರಾಟವು ಜಾಗತಿಕವಾಗಿ ಹಲವಾರು ಆಂದೋಲನಗಳಿಗೆ ಸ್ಪೂರ್ತಿ ನೀಡಿದವು.

ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಗಾಂಧೀಜಿಯ ಕಾಳಜಿ:

ಮಹಾತ್ಮಾ ಗಾಂಧೀಜಿಯವರು ಬಡತನ ನಿವಾರಣೆ,ಮಹಿಳೆಯರ ಹಕ್ಕುಗಳು,ಧಾರ್ಮಿಕ ಸೌಹಾರ್ದತೆ,ಶಿಕ್ಷಣ,ಸಮಾನತೆ ಇತ್ಯಾದಿಗಳಿಗಾಗಿ ಬಹಳಷ್ಟು ಹೋರಾಟ ನಡೆಸಿದರು.ಹಳ್ಳಿಗಳ‌ ಉದ್ಧಾರದಿಂದ ದೇಶದ ಉದ್ಧಾರ ಸಾಧ್ಯ‌ ಎಂಬ ಧ್ಯೇಯದೊಂದಿಗೆ ಹಳ್ಳಿಯ ಆಭಿವ್ರದ್ಧಿಯ ಮೇಲೆ ಬಹಳಷ್ಟು ಕಾಳಜಿಯನ್ನು ಇಟ್ಟಿದ್ದರು. ಸಾಮಾಜಿಕ ಸುಧಾರಣೆಗಳಿಗಾಗಿ ಗಾಂಧೀಜಿಯು ಬಹಳಷ್ಟು ತ್ಯಾಗವನ್ನು ಅನುಭವಿಸಿದರು.

ಮಹಾತ್ಮಾ ಗಾಂಧೀಜಿಯ ಹತ್ಯೆ;

ಮಹಾತ್ಮಾ ಗಾಂಧೀಜಿಯವರು 1948ನೇ ಜನವರಿ 30ರಂದು ಪ್ರಾರ್ಥನಾ ಸಭೆಗೆ ಹೋಗುತ್ತಿದ್ದ ವೇಳೆ ನಾಥೂರಾಮ್ ಗೋಡ್ಸೆ ಎಂಬ ಕಠೋರನು ಗಾಂಧೀಜಿಯವರ ಎದೆಗೆ ಗುಂಡು ಹಾರಿಸಿ ಬಿಟ್ಟ,ಗಾಂಧೀಜಿಯವರು ಹೇರಾಮ್ ಎನ್ನುತ್ತಾ ಪ್ರಾಣಬಿಟ್ಟರು.ಗಾಂಧೀಜಿಯವರ ಅಂತ್ಯಸಂಸ್ಕಾರ ದೆಹಲಿಯ ಮಹಾರಾಜ ಘಾಟದಲ್ಲಿ ನಡೆಸಲಾಯಿತು.

ಗಾಂಧೀಜಿಯ ಕನಸು ನನಸಾಗಲಿ:

ಮಹಾತ್ಮಾ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಗೌರವಿಸಿದ ಮೇಲೆ ಅವರ ಕನಸನ್ನು ನನಸಾಗಿಸಬೇಕಾಗಿದೆ.ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನೀತಿಯಿಂದ ದಬ್ಬಾಳಿಕೆ ನಡೆಸಿದರು.ಗಾಂಧೀಜಿಯವರು ಜವಾಹರ್ ಲಾಲ್ ನೆಹರು,ಗಫ್ಫಾರ್ ಖಾನ್‌ ರಂತಹ ಸ್ವಾತಂತ್ರ್ಯ ಹೋರಾಟಗಾರರ ಜೊತೆಯಾಗಿ ಹೋರಾಡಿದರು.

ಇಂದು ನಮ್ಮ ದೇಶದ ರಾಜಕಾರಣವು ಮತ್ತೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ.ಪೌರತ್ವವನ್ನು ಪ್ರಶ್ನಿಸುತ್ತಿದೆ,ತಿನ್ನುವ ಮತ್ತು ಮಾತಾಡುವ ಸ್ವಾತಂತ್ರ್ಯವನ್ನು ಹತ್ತಿಕ್ಕುತಿದೆ. ಕಾರ್ಪೋರೇಟರ್ ಕುಳಗಳನ್ನು ಬೆಳೆಸುತ್ತಿದೆ,ಕ್ರಷಿ ಮಸೂದೆಗಳನ್ನು ತಂದು ರೈತರನ್ನು ಬೀದಿಗೆ ತರುತ್ತಿದೆ,ರೈತರ ಹಕ್ಕುಗಳನ್ನು ತಡೆಯುತ್ತಿದೆ. ಮಾಧ್ಯಮ ಸ್ವಾತಂತ್ರ್ಯವನ್ನು ಕಸಿಯುತ್ತಿದೆ,ನ್ಯಾಯವು ಮರೀಚಿಕೆಯಾಗುತ್ತಿದೆ,ಅಡಳಿತದ ವೈಫಲ್ಯದ ವಿರುದ್ಧ ದ್ವನಿ ಎತ್ತಿದವರನ್ನು ಮತ್ತು ನಾಗರಿಕರ ಹಕ್ಕುಗಳಿಗಾಗಿ ಹೋರಾಟ ಮಾಡುವವರನ್ನು ಜೈಲುಪಾಲಾಗಿಸಿದೆ.ಸರ್ವಾಧಿಕಾರ ಹಾಗೂ ದಬ್ಬಾಳಿಕೆಯ ವಿರುದ್ಧ  ದ್ವನಿ ಎತ್ತುತ್ತಾ ಗಾಂಧೀಜಿಯವರ ಕನಸು ನನಸಾಗಬೇಕಾಗಿದೆ.ಗಾಂಧೀಜಿಯವರ ಕನಸಿನ ಭಾರತಕ್ಕೆ ಪಣತೊಡುವ ಮುಖಾಂತರ ಗಾಂಧಿ ಜಯಂತಿ ಆಚರಿಸುವಲ್ಲಿ ಅರ್ಥಪೂರ್ಣವಾಗುತ್ತದೆ.

  • ನವಾಝ್ ತುಂಬೆ

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು