BIG NEWS… ಗಣರಾಜ್ಯೋತ್ಸವ ಪೆರೇಡ್ ಕ್ಯಾಂಪಿನಲ್ಲಿ ಕೊರೋನಾ ಹಾವಳಿ | ಹಲವು ಸೈನಿಕರಿಗೆ ಕೊರೋನಾ ದೃಢ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(23-12-2020): ಪ್ರಜಾಪ್ರಭುತ್ವ ದಿನ ನಡೆಯಲಿರುವ ಪೆರೇಡ್ ಕ್ಯಾಂಪಿನಲ್ಲಿ ಕೊರೋನಾ ಹರಡಿರುವ ಬಗ್ಗೆ ವರದಿಯಾಗಿದೆ. ಹಲವು ಸೈನಿಕರಿಗೆ ಕೊರೋನಾ ದೃಢಪಟ್ಟಿದೆ.

ಆರ್ಮಿ ಬೇಸ್ ಆಸ್ಪತ್ರೆಯೊಂದರಲ್ಲೇ ಒಂದೇ ದಿನದಲ್ಲಿ 86 ಸೈನಿಕರನ್ನು ಸೇರಿಸಲಾಗಿದ್ದು, ಇನ್ನೂ ಹಲವು ಸೈನಿಕರು ದೃಢಪಟ್ಟವರ ಸಂಪರ್ಕದಲ್ಲಿದ್ದ ಕಾರಣದಿಂದ ನಿಗಾದಲ್ಲಿ ಇರಿಸಲಾಗಿದೆ.

ಪೆರೇಡ್, ಆರ್ಮಿ ಡೇ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಳೆದ ಒಂದೂವರೆ ತಿಂಗಳಿನಿಂದ ಸೈನಿಕರು ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದರು. ದೆಹಲಿಗೆ ಬರುವ ಮೊದಲೇ ಇವರ ಕೊರೋನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದಿತ್ತು.

ಆದರೆ ಕಳೆದ ಕೆಲವು ದಿನಗಳಲ್ಲಿ ಕೆಲವು ಸೈನಿಕರಿಗೆ ಕೊರೋನಾ ಲಕ್ಷಣಗಳು ಕಂಡು ಬಂದಾಗ ಅವರನ್ನು ತಪಾಸಣೆಗೆ ಒಳಪಡಿಸಿದರು. ಹಲವರಿಗೆ ಕೊರೋನಾ ದೃಢಪಟ್ಟಿದೆ. ದೃಢಪಟ್ಟವರು, ಹಲವರೊಂದಿಗೆ ಸಂಪರ್ಕದಲ್ಲಿ ಏರ್ಪಟ್ಟಿರುವುದರಿಂದ ಕರೋನಾ ಬಾಧಿತರ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯು ನಿಚ್ಛಳವಾಗಿದೆ.

ಪ್ರಜಾಪ್ರಭುತ್ವ ದಿನದ ಕ್ಯಾಂಪಿನಲ್ಲಿ ಕೊರೋನಾ ಹರಡಿರುವುದರಿಂದ ಕಾರ್ಯಕ್ರಮವು ಅನಿಶ್ಚಿತತೆಯಲ್ಲಿದೆಂಯೆಬ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಬಗ್ಗೆ ಭೂ ಸೇನೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು