ಧಾರವಾಡ(16-11-2020): ಜೂಜಾಟದಲ್ಲಿ ತೊಡಗಿದ್ದ ಕಾಂಗ್ರೆಸ್-ಬಿಜೆಪಿ ನಾಯಕರು ಸೇರಿ 126 ಮಂದಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ರಮ್ಯಾ ರೆಸಿಡೆನ್ಸಿ, ಪ್ರೀತಿ ರೆಸಿಡೆನ್ಸಿಯಲ್ಲಿ ಇವರು ಜೂಜಾಟದಲ್ಲಿ ತೊಡಗಿದ್ದರು. ಬಂಧಿತರಿಂದ 56 ಲಕ್ಷ ರೂ. ನಗದು, 40 ಕಾರು, 65 ಮೊಬೈಲ್ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್, ಬಿಜೆಪಿಯ ತವನಪ್ಪ ಅಷ್ಟಗಿ, ಹೋಟೆಲ್ ಉದ್ಯಮಿ ಮಹೇಶ್ ಶೆಟ್ಟಿ ಸೇರಿದ್ದಾರೆ.
ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಮಾತನಾಡಿ, ನಾನು, ತವನಪ್ಪ ಅಷ್ಟಗಿ ಮತ್ತು ದೀಪಕ್ ಅವರು ರಮ್ಯಾ ರೆಸಿಡೆನ್ಸಿಗೆ ದೀಪಾವಳಿ ಪೂಜೆಗೆ ಹೋಗಿದ್ದೆವು. ಆದರೆ ನಮ್ಮ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.