ಗಡಿ ಜಿಲ್ಲೆ ಬೀದರ್ ನಲ್ಲಿ ಅಪರೂಪದ ‘ಕರಿನವಿಲು’ ಪತ್ತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀದರ್ (ಔರಾದ್‌): ಬೀದರ್ ಜಿಲ್ಲೆಯ ಗಡಿ ಭಾಗದ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಎರಡು ಅಪರೂಪದ ಕರಿ ನವಿಲುಗಳು ಪತ್ತೆಯಾಗಿವೆ.

ಔರಾದ್ ತಾಲ್ಲೂಕಿನ ಚಟ್ನಾಳ ಹಾಗೂ ಬೀದರ್ ಸಮೀಪದ ಚೊಂಡಿ ಗ್ರಾಮದ ಶಿವಾರ್ ದಲ್ಲಿ ಪತ್ತೆಯಾದ ಈ ಅಪರೂಪದ ನವಿಲುಗಳು ಪಕ್ಷಿ ಪ್ರೇಮಿಗಳ ಗಮನ ಸೆಳೆದಿವೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್) ನಿರ್ದೇಶಕ ಡಾ. ಬಿವಾಶ್‌ ಪಾಂಡವ್ ಅವರ ತಂಡ ಭಾನುವಾರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಕರಿನವಿಲು ಚಿತ್ರಗಳನ್ನು ಕ್ಯಾಮೆರಾ ದಲ್ಲಿ ಸೆರೆ ಹಿಡಿದಿದ್ದಾರೆ.

ಕರಿನವಿಲು ಅಳಿವಿನಂಚಿನಲ್ಲಿರುವ ಪಕ್ಷಿ. ಅಧ್ಯಯನದ ಪ್ರಕಾರ ದೇಶದಲ್ಲಿ ಇಂಥ 600 ಪಕ್ಷಿಗಳು ಮಾತ್ರ ಇವೆ. ಕರ್ನಾಟಕದಲ್ಲಿ ಬೀದರ್ ಹೊರತುಪಡಿಸಿ ಎಲ್ಲಿಯೂ ಈ ಪಕ್ಷಿ ಪತ್ತೆಯಾಗಿಲ್ಲ. ಕರ್ನಾಟಕ ಹೊರತುಪಡಿಸಿದರೆ ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಅಪರೂಪವಾಗಿ ಪತ್ತೆಯಾದ ‘ಕರಿನವಿಲು’ ಸಂತತಿಯ ಉಳಿವಿಗಾಗಿ ವಿಶೇಷ ತಂಡ ರಚಿಸಲು ಸರ್ಕಾರ ಮುಂದಾಗಬೇಕು, ಹಾಗೂ ಸಂತಪೂರ ವಲಯದ ಜೀರ್ಗಾ – ಚಟ್ನಾಳ ಅರಣ್ಯ ಪ್ರದೇಶದಲ್ಲಿ ‘ನವಿಲು ಪಕ್ಷಿಧಾಮ’ ನಿರ್ಮಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಈ ಭಾಗದ ಪಕ್ಷಿ ಪ್ರೇಮಿಗಳು ಒತ್ತಾಯವಾಗಿದೆ.

ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ಹಾಗೂ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಿವಶಂಕರ, ಸಂತಪೂರ ಉಪ ವಲಯ ಅರಣ್ಯಾಧಿಕಾರಿ ಅಂಕೋಶ್ , ವಲಯ ಅರಣ್ಯ ರಕ್ಷಕ ಬಸವರಾಜ ಕುಂಬಾರ ಅವರು ವೀಕ್ಷಣೆ ತಂಡದ ಜೊತೆಗಿದ್ದು ಮಾಹಿತಿ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು