ಮಸ್ಕತ್(6-11-2020): ನವೆಂಬರ್ ಹನ್ನೊಂದರ ಬಳಿಕ ಒಮನಿಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರಿಗೂ ಹೊಸದೊಂದು ಷರತ್ತು ಅನ್ವಯವಾಗಲಿದೆ. ಪ್ರಯಾಣಿಕರು ಕೊರೋನಾ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕೆಂಬುದೇ ಆ ಷರತ್ತು.
ಒಮನಿಗೆ ತಲುಪುವ 96 ಗಂಟೆಗಳ ಮೊದಲು ಪಿಸಿಆರ್ ಪರೀಕ್ಷೆ ನಡೆಸಿದ ಪ್ರಮಾಣಪತ್ರ ಅಗತ್ಯವಾಗಿದ್ದು, ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇದು ಅನ್ವಯವಾಗುವುದಿಲ್ಲ.
ಇದರ ಜೊತೆಗೆ ಯಾವುದೇ ದೇಶಗಳಿಂದ ಒಮನ್ ತಲುಪಿದ ಪ್ರಯಾಣಿಕರು ಏಳು ದಿನಗಳ ಕ್ವಾರೈಂಟೈನ್ ಅವಧಿಯನ್ನೂ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಒಮನ್ ಸಿವಿಲ್ ಏವಿಯೇಷನ್ ಮೇಲಿನ ಷರತ್ತುಗಳನ್ನು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.