ರಾತ್ರಿ ಸತ್ತನೆಂದು ಫ್ರೀಜರ್ ಪೆಟ್ಟಿಗೆಯೊಳಗೆ ಇಟ್ಟುಕೊಂಡಿದ್ದ ವ್ಯಕ್ತಿ ಬೆಳಿಗ್ಗೆ ಉಸಿರಾಡುತ್ತಿದ್ದ!

freezer
Share on facebook
Share on twitter
Share on linkedin
Share on whatsapp
Share on telegram
Share on email
Share on print

ತಮಿಳುನಾಡು(14-10-2020): ಒಂದು ವಿಲಕ್ಷಣ ಘಟನೆಯಲ್ಲಿ, 74 ವರ್ಷದ ವೃದ್ಧರೋರ್ವರನ್ನು  ಸತ್ತಿದ್ದಾರೆಂದು  ರಾತ್ರಿಯಿಡೀ ಫ್ರೀಜರ್ ಪೆಟ್ಟಿಗೆಯೊಳಗೆ ಇಟ್ಟುಕೊಂಡಿದ್ದ ಅವರ ಕುಟುಂಬವು ಮರುದಿನ ಜೀವಂತವಾಗಿರುವುದು ಕಂಡು ಅಚ್ಚರಿಪಟ್ಟಿದೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಕಂಧಂಪತ್ತಿಯ ಬಾಲಸುಬ್ರಮಣ್ಯ ಕುಮಾರ್ ಅವರ ಕುಟುಂಬ ಸೋಮವಾರ ಅವರ ಶವವನ್ನು ಫ್ರೀಜರ್ ಪೆಟ್ಟಿಗೆಯಲ್ಲಿ ಇಟ್ಟಿದೆ ಎಂದು ವರದಿಯಾಗಿದೆ. ಆ ವ್ಯಕ್ತಿ ಇನ್ನೂ ಉಸಿರಾಡುತ್ತಿದ್ದಾರೆ ಎಂದು ಫ್ರೀಜರ್ ಕಂಪನಿಯ ತಯಾರಕರು ಎಚ್ಚರಿಸಿದ ನಂತರ ಆ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ರಕ್ಷಿಸಿದ್ದಾರೆ.

ವ್ಯಕ್ತಿಯನ್ನು ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು