ನವದೆಹಲಿ(26-01-2021): ನವದೆಹಲಿಯ ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾತ್ಮಕ ಸ್ವರೂಪವನ್ನು ಪಡೆದಿದೆ. ರೈತರ ಸೋಗಿನಲ್ಲಿ ಬಂದ ಕೆಲದುಷ್ಕರ್ಮಿಗಳು ಕೆಂಪು ಕೋಟೆಗೆ ಹತ್ತಿ ದಾಂಧಲೆ ನಡೆಸಿ ಧ್ವಜವನ್ನು ಹಾರಾಟ ಮಾಡಿದ್ದಾರೆ.
ದೆಹಲಿ ಕೆಂಪು ಕೋಟೆ ಹತ್ತಿರುವ ದುಷ್ಕರ್ಮಿಗಳು ರೈತರ ಇಷ್ಟು ದಿನಗಳ ಹೋರಾಟದ ಉದ್ದೇಶವನ್ನೇ ಮಣ್ಣುಪಾಲಾಗಿಸುವ ಕೃತ್ಯವನ್ನು ನಡೆಸಿದ್ದಾರೆ.
ಇದಲ್ಲದೆ ದೆಹಲಿ ಪೊಲೀಸರ ಗುಂಡಿಗೆ ಓರ್ವ ರೈತ ಮೃತಟ್ಟಿರುವುದಾಗಿ ಇದೀಗ ವರದಿಯಾಗಿದೆ. ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಟ್ರ್ಯಾಕ್ಟರ್ ರಾಲಿ ಹಿಂಸಾತ್ಮಕ ರೂಪ ಪಡೆದಿದೆ. ರೈತರ ಟ್ರ್ಯಾಕ್ಟರ್ ರಾಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬಸ್ ಗಳ ಗಾಜನ್ನು ಪುಡಿಗೈಯಲಾಗಿದೆ. ಬಸ್ ಗೆ ಟ್ರ್ಯಾಕ್ಟರ್ ಗಳಿಂದ ಗುದ್ದಿ ಹಾನಿ ಮಾಡಲಾಗಿದೆ. ಇದಕ್ಕೂ ಮೊದಲು ದಿಲ್ಲಿ ಪ್ರವೇಶಿಸಿದ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಯಿತು. ರೈತರು ಪೊಲೀಸರನ್ನು ಕ್ಯಾರೇ ಎನ್ನದೆ ಸಿಂಘ್ ಗಡಿಯನ್ನು ದಾಟಿದ್ದರು.
#WATCH A protestor hoists a flag from the ramparts of the Red Fort in Delhi#FarmLaws #RepublicDay pic.twitter.com/Mn6oeGLrxJ
— ANI (@ANI) January 26, 2021