ಗಣರಾಜ್ಯೋತ್ಸವದ ಟ್ರಾಕ್ಟರ್ ರ್ಯಾಲಿ ವೇಳೆ ಪೊಲೀಸ್ ವೇಷ ಧರಿಸಿ  ರೈತ ಮುಖಂಡರ ಹತ್ಯೆಗೆ ಸ್ಕೆಚ್!  

formrse
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(23-01-2021):ಗಣರಾಜ್ಯೋತ್ಸವದ ದಿನ ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟು ಮಾಡಲು ಪ್ರತಿಭಟನಾ ನಿರತ ರೈತ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟು ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕಲು ದುಷ್ಕರ್ಮಿಗಳು ಯೋಜನೆಯನ್ನು ರೂಪಿಸಿದ್ದಾರೆ.

ರೈತ ಮುಖಂಡರು ಈ ಕುರಿತು ದೆಹಲಿಯ ಸಿಂಘು ಗಡಿಭಾಗದಲ್ಲಿ  ನಿನ್ನೆ ಮಾದ್ಯಮಗಳ ಜೊತೆ ಮಾತನಾಡಿ ಈ ಗಂಭೀರವಾದಂತಹ ಆರೋಪವನ್ನು ಮಾಡಿದ್ದಾರೆ.

ಪೊಲೀಸ್ ರಂತೆ ವೇಷ ಧರಿಸಿ ಒಬ್ಬ ವ್ಯಕ್ತಿಗೆ ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ರೈತರ ಗುಂಪಿನ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಈಗ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ವಿಫಲಗೊಳಿಸುವ ಯತ್ನ ನಡೆಯುತ್ತಿದೆ ಎಂದು ರೈತ ನಾಯಕ ಕುಲ್ವಂತ್ ಸಿಂಗ್ ಸಂಧು ಆರೋಪಿಸಿದ್ದಾರೆ.

ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರಕಾರ ಈ ಮೊದಲು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿತ್ತು. ರೈತರು ಖಲಿಸ್ತಾನಿಗಳು, ದೇಶದ್ರೋಹಿಗಳು ಎಂದೆಲ್ಲಾ ಚಿತ್ರಿಸಲು ಪ್ರಯತ್ನಿಸಿತ್ತು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರೈತರ ಹತ್ಯೆಗೆ ಸ್ಕೆಚ್ ಹಾಕಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು