ನೂತನ ಕೃಷಿ ಮಸೂದೆI ಯಡಿಯೂರಪ್ಪ ಹೇಳಿದ್ದು ಹೀಗೆ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(28.09.2020): ರಾಜ್ಯದಲ್ಲಿ ರೈತರಿಗೆ ಸ್ವಾತಂತ್ರ್ಯ ನೀಡುವುದಕ್ಕಾಗಿ ಅವರು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಾಗಲಿ ಅಥವಾ ಎಲ್ಲಿಬೇಕಾದರೂ ಮಾರುವ ಅವಕಾಶ ನೀಡಲಾಗಿದೆ. ಇದನ್ನು ಬಹುತೇಕ ರೈತರು ಸ್ವಾಗತಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿಂದು ರೈತರು ಬಂದ್ ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.  ದಿನೇಶ್ ಸಿಂಧೆ ಎಂಬವರು ಪ್ರತಿಕ್ರಿಯಿಸಿ,  ಮೊದಲು ನುಡಿದಂತೆ ನಡೆಯಿರಿ ಅರ್ಥ ಮೊದಲು ರೈತರ ಸಾಲ ಮನ್ನ ಮಾಡಿ ಮತ್ತು ಅವರ ಬೇಡಿಕೆಗಳನ್ನು ಪೂರೈಸಿ, ಉತ್ತರ ಕರ್ನಾಟಕದ ಕಡೆ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ , ಪ್ರತಿಸಾರಿಯು ರೈತರೇ ನಿಮ್ಮಹತ್ರ ಕೇಳಬೇಕಾ, ದಯವಿಟ್ಟು ಅದನ್ನು ಗಮನಹರಿಸಿ ಎಂದು ಹೇಳಿದ್ದಾರೆ.

ಶ್ರೀ ಯುತ ಯಡಿಯೂರಪ್ಪನವರೆ, ಈ ತಿದ್ದುಪಡಿಗಳಿಂದ ರೈತರಿಗೆ ಯಾವುದೇ ಅಪಾಯವಿಲ್ಲ ಹಾಗೂ ಈ ತಿದ್ದು ಪಡಿಗಳಿಂದ ರೈತರಿಗೆ ಹೇಗೆ ಅನುಕೂಲ ಮಾಡಿಕೊಡುತ್ತಿದ್ದೀರಿ ಎಂಬುದನ್ನ ಜನಸಾಮಾನ್ಯರಿಗೆ ಸರಳವಾಗಿ ಮುಟ್ಟುವಂತೆ ತಿಳಿಸಿ….. ೫ ಜನರಿರುವ ಒಂದು ಕುಟುಂಬ ಸುಮಾರು ೪೫೦ ಎಕರೆಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ವಿವರಣೆ ಏನು? ಎಂದು ಕುಮಾರ ಸಿ.ಎಸ್. ಎಂಬವರು ಪ್ರಶ್ನಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು