ಮಹಿಳೆಯರು ಮನೆಗೆ ಹೋದ್ರೆ ಕೇಸ್ ವಾಪಸ್ಸ್! ಕೊನೆಗೂ ಸಿಕ್ಕಿಬಿದ್ದ ಕಾಮುಕ ಉಪವಲಯ ಅರಣ್ಯಾಧಿಕಾರಿ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿಕ್ಕಮಗಳೂರು(16-11-2020): ಉಪವಲಯ ಅರಣ್ಯಾಧಿಕಾರಿಯೋರ್ವ ಕೇಸ್ ವಾಪಾಸ್ಸು ತೆಗೆಯಲು ಮಹಿಳೆಯರನ್ನು ಕ್ವಾಟ್ರಸ್ ಗೆ ಕರೆಸಿಕೊಳ್ಳುತ್ತಿರುವ ವಿಚಾರ ತಿಳಿದು ಗ್ರಾಮಸ್ಥರು ಕ್ವಾಟ್ರಸ್ ಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

 ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಬಲ್ ನಲ್ಲಿ ಕೊಪ್ಪ ವಿಭಾಗದ ಉಪವಲಯ ಅರಣ್ಯಾಧಿಕಾರಿ ಚಂದನ್ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಮನೆ ಪಕ್ಕದಲ್ಲಿದ್ದ ಒಣ ಮರ  ಕಡಿದ ಕಾರಣಕ್ಕೆ ಮಹಿಳೆಯ ಪತಿ ವಿರುದ್ಧ ಚಂದನ್ ಕೇಸ್ ದಾಖಲಿಸಿದ್ದು, ಬಳಿಕ ಮಹಿಳೆ ಜೊತೆ ಮಾತನಾಡಿ ಕೇಸ್ ವಾಪಸ್ ತೆಗೆಯುತ್ತೇನೆ ಕ್ವಾಟ್ರಸ್ ಗೆ ಬರುವಂತೆ ಹೇಳಿದ್ದಾನೆ. ಇದರಂತೆ ಮಹಿಳೆ ಉಪವಲಯ ಅರಣ್ಯಾಧಿಕಾರಿ ಬಳಿ ತೆರಳಿದ್ದಾಳೆ. ಈ ವೇಳೆ ಗ್ರಾಮಸ್ಥರು ಕ್ವಾಟ್ರಸ್ ಗೆ ಮುತ್ತಿಗೆ ಹಾಕಿದ್ದು, ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಗದ್ದಲ ಉಂಟುಮಾಡಿದ್ದಾರೆ.

ಸಧ್ಯ ಉಪವಲಯ ಅರಣ್ಯಾಧಿಕಾರಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಮಹಿಳೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು