ಹಿಮಪಾತ: ಉತ್ತರಖಂಡದಲ್ಲಿ ದಿಡೀರ್ ಹಳ್ಳಿಗಳಿಗೆ ನುಗ್ಗಿದ ಪ್ರವಾಹ: ಅಪಾರ ಸಾವು-ನೋವು ಸಾಧ್ಯತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರಾಖಂಡ (07-02-2020): ಉತ್ತರಾಖಂಡದ ಚಮೋಲಿಯಲ್ಲಿ ಮೇಘಸ್ಪೋಟದಿಂದ ಹಿಮಪಾತವಾಗಿದ್ದು ನದಿಯಲ್ಲಿ ಪ್ರವಾಹಕ್ಕೆ ಹಲವಾರು ಮಂದಿ ಮೃತಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಒಡೆದಿದೆ. ಉತ್ತರಾಖಂಡದ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಭಾನುವಾರ ಏರಿದೆ.ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಈ ಘಟನೆ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ರೈನಿ ಗ್ರಾಮದಿಂದ ವರದಿಯಾಗಿದ್ದು, ಸಾವುನೋವು ಸಂಭವಿಸಿದೆ.ನೂರಾರು ಐಟಿಬಿಪಿ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ.ಘಟನೆಯ ಸಮಯದಲ್ಲಿ ಸುಮಾರು 50 ಕಾರ್ಮಿಕರು ಸೈಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಧೌಲಿಗಂಗಾ ನದಿಯ ದಂಡೆಯಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಚಮೋಲಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಥಳಕ್ಕೆ ತೆರಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು