ಕೊಚ್ಚಿ (04-10-2020): ನೌಕಾಪಡೆಯ ಇಬ್ಬರು ಅಧಿಕಾರಿಗಳು ಗ್ಲೈಡರ್ ವಿಮಾನ ಪತನವಾಗಿ ಮೃತಪಟ್ಟ ಘಟನೆ ಕೇರಳದ ಕೊಚ್ಚಿಯಲ್ಲಿ ಇಂದು ನಡೆದಿದೆ.
ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಮೃತ ಅಧಿಕಾರಿಗಳು. ಕೊಚ್ಚಿಯ ತೊಪ್ಪುಂಪಾಡಿ ಸೇತುವೆ ಬಳಿ ಗ್ಲೈಡರ್ ವಿಮಾನ ಪತನವಾಗಿದೆ. ಐಎನ್ ಎಸ್ ಗರುಡಾದಿಂದ ದಿನನಿತ್ಯದ ತರಬೇತಿಗಾಗಿ ಗ್ಲೈಡರ್ ಹೊರಟಿತ್ತು ಎಂದು ವರದಿ ತಿಳಿಸಿದೆ.
ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.