ಪಿಜ್ಜಾ ಮನೆಗೆ ತಲುಪಿಸುವುದಾದರೆ ರೇಷನ್ ಯಾಕೆ ಮನೆಗೆ ಹಂಚಬಾರದು? : ಅರವಿಂದ ಕೇಜ್ರಿವಾಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ : ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ತಲುಪಿಸುವ ಯೋಜನೆ ಜಾರಿಗೆ ಕೇಂದ್ರ ಸರಕಾರದ ಅನುಮತಿ ಬೇಕಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ಇಂದು ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಸುಮಾರು 72 ಲಕ್ಷ ಕುಟುಂಬಗಳಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಗೆ ಕೇಂದ್ರ ಸರಕಾರ ಅನುಮತಿ ಬೇಕಿಲ್ಲ. ಕಾನೂನಿನ ಅನ್ವಯ ಮೂಗು ತೂರಿಸುವ ಹಾಗಿಲ್ಲ. ಆದರೆ ನಾವು ಸೌಜನ್ಯಕ್ಕಾಗಿ ಕೇಂದ್ರದ ಗಮನಕ್ಕೆ ತಂದಿದ್ದೇವೆ ಎಂದು ಕೇಂದ್ರದ ವಿರುದ್ಧ ಕೇಜ್ರಿವಾಲ್ ಗುಡುಗಿದ್ದಾರೆ.

ಪಿಜ್ಜಾವನ್ನು ಮನೆಗೆ ತಲುಪಿಸುವುದಾದರೆ ಪಡಿತರವನ್ನು ಯಾಕೆ ಮನೆಗೆ ಹಂಚಬಾರದು” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೆ ಕೇವಲ 2 ದಿನ ಬಾಕಿ ಇರುವಾಗ ಕೇಂದ್ರ ಯೋಜನೆಗೆ ತಡೆಯೊಡ್ಡಿದೆ. ಈ ಯೋಜನೆಗೆ ಪೂರ್ವಭಾವಿ ಅನುಮತಿ ಪಡೆದಿಲ್ಲ ಎಂದು ಹೇಳಿದೆ. ಆದರೆ ನಾವು ಈ ಬಗ್ಗೆ ಒಂದು ಬಾರಿಯಲ್ಲ 5 ಬಾರಿ ಅನುಮತಿ ಪಡೆದಿದ್ದೇವೆ. ಆದರೆ ಕಾನೂನು ಪ್ರಕಾರ ಹೇಳುವುದಾದರೆ ಈ ಯೋಜನೆಗೆ ಕೇಂದ್ರದ ಅನುಮತಿಯೇ ಬೇಕಿಲ್ಲ ಎಂದು ಅವರು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು