ಚೆನ್ನೈ(27-10-2020): ಭಾರತೀಯ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಮೀನುಗಾರರಲ್ಲಿ ಒಬ್ಬರು ಗಾಯಗೊಂಡಿದ್ದಾರೆ.
ಭಾರತೀಯ ಮೀನುಗಾರರು ತಾವು ಲಂಕಾ ನೀರಿನಲ್ಲಿ ಅತಿಕ್ರಮಣ ಮಾಡಿರುವುದನ್ನು ನಿರಾಕರಿಸಿದ್ದಾರೆ. ಕಲ್ಲುಗಳನ್ನು ಎಸೆದು ಅವರ ಬಲೆಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಇನ್ನೂ ಔಪಚಾರಿಕ ದೂರು ನೀಡಿಲ್ಲ ಮತ್ತು ಘಟನೆಯ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ರಾಮೇಶ್ವರಂ ಮೂಲದವರು ಗಾಯಗೊಂಡ ಮೀನುಗಾರರು. ಲಂಕಾ ಅಧಿಕಾರಿಗಳು ಮೀನುಗಾರರಿಗೆ ಕಿರುಕುಳ ನೀಡುವ ವಿಷಯವನ್ನು ಈ ಹಿಂದೆ ಕೇಂದ್ರಕ್ಕೆ ತಮಿಳುನಾಡು ಸರಕಾರ ಗಮನಕ್ಕೆ ತಂದಿತ್ತು, ಹಿಂದೂ ಮಹಾಸಾಗರದ ಪ್ರಾದೇಶಿಕ ನೀರಿನಲ್ಲಿ ಹಾದುಹೋಗುವ ಭಾರತೀಯ ಮೀನುಗಾರರಿಗೆ ನೀಡುತ್ತಿರುವ ಕಿರುಕುಳವನ್ನು ಕೊನೆಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು.