ಮಂಗಳೂರು(30-11-2020): ಮೀನಿನ ಬಲೆಗೆ ಬಿದ್ದು ಮೀನುಗಾರ ಸಮುದ್ರದ ಮಧ್ಯೆ ಮೃತಪಟ್ಟಿರುವ ಘಟನೆ ಭಾನುವಾರ ಬೈಕಂಪಾಡಿ ಬಳಿ ಸಮುದ್ರದಲ್ಲಿ ನಡೆದಿದೆ.
ನವೀನ್ ಕರ್ಕೇರ(32) ಮೃತ ದುರ್ದೈವಿ. ಇವರು ಸಮುದ್ರದಲ್ಲಿ ಸ್ವಲ್ಪ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆ ಬಲೆಗೆ ಕಾಲು ಬೆರಳು ಸಿಲುಕಿದ್ದು ನವೀನ್ ನೀರಿಗೆ ಬಿದ್ದು ಮುಳುಗಿದ್ದಾರೆ. ನವೀನ್ ಈಜು ಬಲ್ಲವರಾಗಿದ್ದದೂ ಕಾಲು ಬಲೆಯಲ್ಲಿ ಸಿಲುಕಿದ ಕಾರಣ ದಡ ಸೇರಲು ಸಾಧ್ಯವಾಗಿಲ್ಲ.
ನವೀನ್ ಪೋಷಕರಿಗೆ ನಾಲ್ವರು ಮಕ್ಕಳು.ನಾಲ್ವರು ಅವಘಢದಲ್ಲಿ ಮೃತಪಟ್ಟಿದ್ದರೆ. ತಂದೆ ಕೂಡ ಮೃತಪಟ್ಟಿದ್ದಾರೆ. ಈಗ ತಾಯಿ ಒಬ್ಬಂಟಿಯಾಗಿದ್ದು ರೋಧನ ಮುಗಿಲುಮುಟ್ಟಿದೆ. ನವೀನ್ ಸಹೋದರ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದ, ಇನ್ನೋರ್ವ ಅಪಘಾತದಲ್ಲಿ ಮೃತಪಟ್ಟಿದ್ದ. ಮತ್ತೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದ.