ಲಕ್ಷಾಂತರ ಮೀನುಗಳಿಗೆ ವಿಷ ಹಾಕಿದ್ರು!

fish
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಯಚೂರು(10-10-2020): ರಾಯಚೂರು ತಾಲೂಕಿನ ಕಟ್ಲಾಟಕೂರ್ ಕೆರೆಗೆ ರಾತ್ರೋ ರಾತ್ರಿ ದುಷ್ಕರ್ಮಿಗಳು ವಿಷ ಹಾಕಿದ್ದು, ಲಕ್ಷಾಂತರ ಮೀನುಗಳು ಸತ್ತು ಹೋಗಿದೆ.

350 ಎಕರೆ ಪ್ರದೇಶದ ಕೆರೆಗೆ ದುಷ್ಕರ್ಮಿಗಳು ವಿಷವನ್ನು ಹಾಕಿದ್ದು, 5 ಲಕ್ಷಕ್ಕೂ ಅಧಿಕ ಮೀನುಗಳು ಸತ್ತುಹೋಗಿದೆ. ಕಟ್ಲಾಟಕೂರ್ ಕೆರೆ ಸುತ್ತ ಮುತ್ತಲಿನ ಜನರ ಜೀವನಾಧಾರವಾಗಿತ್ತು. ಈ ಕೆರೆಯ ಮೀನುಗಾರಿಕೆಯನ್ನು ನಂಬಿ 150ಕ್ಕೂ ಅಧಿಕ ಕುಟುಂಬಗಳು ಜೀವನ ಸಾಗಿಸುತ್ತಿದ್ದವು.

ಈ ಬಾರಿ ಚೆನ್ನಾಗಿ ಮಳೆ ಇದ್ದ ಕಾರಣ ಕೆರೆಯು ತುಂಬಿತ್ತು. ಆಂಧ್ರಪ್ರದೇಶದ ಕಾಕಿನಾಡದಿಂದ ಕಟ್ಲಾ, ರೂಹು, ಮೃಗಲಾ ಸೇರಿ ನಾನಾ ತಳಿಯ 5 ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ತಂದು ಕೆರೆಗೆ ಬಿಡಲಾಗಿತ್ತು. ಇದರಿಂದಾಗಿ ಜನರಲ್ಲಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯು ಇತ್ತು. ಆದರೆ ರಾತ್ರೋ ರಾತ್ರಿ ದುಷ್ಕರ್ಮಿಗಳ ಕೃತ್ಯಕ್ಕೆ ಜನರು ಕಂಗಾಲಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು