ಮೂಡಬಿದ್ರೆ(11-10-2020): ಗೋಸಾಗಾಟರರ ಮೇಲೆ ಮೂಡಬಿದ್ರೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾದ 6 ಗೋವುಗಳನ್ನು ಮತ್ತು ರಿಟ್ಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೌದಾಲ್ ಎಂಬಲ್ಲಿ ಗೋಸಾಗಾಟದ ವಾಹನವನ್ನು ತಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ವೇಳೆ ಗೋ-ಸಾಗಾಟಗಾರರು ಪೊಲೀಸ್ ವಾಹನಕ್ಕೆ ಕಾರನ್ನು ಢಿಕ್ಕಿ ಹೊಡೆದು ಮುಂದಕ್ಕೆ ಪ್ರಯಾಣಿಸಲು ಯತ್ನಿಸಿದ್ದರು. ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತಕ್ಷಣ ಆರೋಪಿಗಳು ಪರಾರಿಯಾಗಿದ್ದಾರೆ.