ರಾಜಸ್ಥಾನ(15-11-2020): ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದನ್ನು ಸರಕಾರ ನಿಷೇಧಿಸಿದೆ. ಇದರ ಜೊತೆಗೆ ರಾಜಸ್ಥಾನ ಸರ್ಕಾರ ದುಬಾರಿ ದಂಡವನ್ನು ವಿಧಿಸುವ ಎಚ್ಚರಿಕೆಯನ್ನು ನೀಡಿದೆ.
ಪಟಾಕಿ ಮಾರಾಟ ಮಾಡಿದರೆ ಮಾಲಿಕರಿಗೆ 10 ಸಾವಿರ ರೂ. ದಂಡ ಹಾಗೂ ಪಟಾಕಿ ಸಿಡಿಸಿದರೆ 2 ಸಾವಿರ ರೂ.ದಂಡ ವಿಧಿಸುವ ಕುರಿತು ರಾಜಸ್ಥಾನ ಸರ್ಕಾರ ಎಚ್ಚರಿಕೆ ನೀಡಿದೆ.
ಮಾಲಿನ್ಯ ನಿಯಂತ್ರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಈ ಬಾರಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಬೆಳಕಿನ ಹಬ್ಬವನ್ನು ಜನರು ಪಟಾಕಿ ಸಿಡಿಸುವ ಮೂಲಕ ಆಚರಣೆ ಮಾಡುತ್ತಿದ್ದರು. ಈ ಬಾರಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.