ಪಣಜಿ(07-11-2020): ಹುಟ್ಟುಹಬ್ಬದ ದಿನ ಗೋವಾ ಬೀಚ್ನಲ್ಲಿ ನಗ್ನವಾಗಿ ಓಡಿದ್ದ ನಟ, ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಮೊದಲು ಗೋವಾ ಬೀಚ್ನಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ ಪೂನಂರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪೂರ್ಣ ನಗ್ನರಾಗಿ ಗೋವಾ ಬೀಚ್ನಲ್ಲಿ ಓಡಿದ್ದ ಮಿಲಿಂದ್ ಸೋಮನ್ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಮಿಲಿಂದ್ ಅವರ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.
ಮಿಲಿಂದ್ ಸೋಮನ್ ಕ್ಯಾಮರಾ ಮುಂದೆ ಈ ಮೊದಲು ನಗ್ನರಾಗಿದ್ದರು.1990 ರಲ್ಲಿ ಮಿಲಿಂದ್ ಸೋಮನ್ ಜಾಹಿರಾತಿಗೋಸ್ಕರ ಮಾಜಿ ಮಿಸ್ ಇಂಡಿಯಾ ಮಧು ಸಾಪ್ರೆ ಜೊತೆ ನಗ್ನರಾಗಿ ಪೋಸ್ ಕೊಟ್ಟಿದ್ದರು.