ಪೌರತ್ವಕ್ಕಾಗಿ ಹೋರಾಡುತ್ತಲೇ ಮೃತಪಟ್ಟ 104ರ ವೃದ್ಧ

Assam man
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಸ್ಸಾಂ(15-12-2020): ಅಸ್ಸಾಂನ ಕ್ಯಾಚರ್ ಜಿಲ್ಲೆಯ 104 ವರ್ಷದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ತನ್ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಹೋರಾಡಿ  ಕೊನೆಗೆ ವಿದೇಶಿಯನಾಗಿಯೇ ಮೃತಪಟ್ಟಿದ್ದಾರೆ.

ಕ್ಯಾಚರ್ ಜಿಲ್ಲೆಯ ಧೋಲೈ ಪೊಲೀಸ್ ಠಾಣೆ ವ್ಯಾಪ್ತಿಯ ಅಮರಘಾಟ್ ಪ್ರದೇಶದ ನಿವಾಸಿ ಚಂದ್ರಧರ್ ದಾಸ್ ಅವರನ್ನು ವಿದೇಶಿಯರ ನ್ಯಾಯಮಂಡಳಿ ಎರಡು ವರ್ಷಗಳ ಹಿಂದೆ ವಿದೇಶಿಯರೆಂದು ಘೋಷಿಸಿತು.

ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಹೋರಾಟ ಮಾಡುತ್ತಿರುವಾಗಲೇ ಅವರು ಭಾನುವಾರ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. 104 ವರ್ಷದ ಚಂದ್ರಧರ್ ದಾಸ್ ಕೊನೆಯ ಉಸಿರಿನವರೆಗೂ, 2019 ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮೂಲಕ ತಮ್ಮ ದುಃಖಗಳು ಕೊನೆಗೊಳ್ಳುತ್ತವೆ ಎಂದು ಭರವಸೆ ಹೊಂದಿದ್ದರು. ಅವರು ಭಾರತದ ಪ್ರಜೆಯಾಗಿ ಕೊನೆಯುಸಿರೆಳೆಯಲು ಇಷ್ಟಪಟ್ಟಿದ್ದರು.

2018 ರ ಜನವರಿಯಲ್ಲಿ ಸಿಲ್ಚಾರ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯಿಂದ ದಾಸ್ ಅವರನ್ನು ವಿದೇಶಿಯರೆಂದು ಘೋಷಿಸಲಾಯಿತು ಮತ್ತು ಅವರನ್ನು ಸಿಲ್ಚಾರ್ ಬಂಧನ ಶಿಬಿರಕ್ಕೆ ಕಳುಹಿಸಲಾಯಿತು.

ವಿದೇಶಿಯರ ನ್ಯಾಯಮಂಡಳಿ ಚಂದ್ರಧರ್ ದಾಸ್ ಅವರನ್ನು ವಿದೇಶಿಯರೆಂದು ಘೋಷಿಸಿತ್ತು ಮತ್ತು ಚಂದ್ರಧರ್ ದಾಸ್ ನ್ಯಾಯಮಂಡಳಿಯ ಮುಂದೆ ಹಾಜರಾಗಲು ವಿಫಲವಾದ ನಂತರ ಅವರ ವಕೀಲ ಸೌಮೆನ್ ಚೌಧರಿ ನ್ಯಾಯಮಂಡಳಿ ಮುಂದೆ ಹಾಜರಾಗಿದ್ದರು.

ದಾಸ್ ಅವರ ಅನಾರೋಗ್ಯ ಮತ್ತು ವೃದ್ಧಾಪ್ಯ ಕಾರಣದಿಂದಾಗಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದೆವು ಮತ್ತು ಮಾನವೀಯ ಆಧಾರದ ಮೇಲೆ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಸ್ವೀಕರಿಸಿತ್ತು.  ಆ ಬಳಿಕ ಅವರು ಕುಟುಂಬಸ್ಥರ ಜೊತೆ ವಾಸವಾಗಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು