ನವದೆಹಲಿ(03-11- 2020): ಬ್ಯಾಂಕ್ ಖಾತೆಗೆ ನಗದು ಜಮೆ ಮಾಡಲು ಕೂಡ ಶುಲ್ಕ ಪಾವತಿಸಬೇಕಿದ್ದು, ಜನರಿಗೆ ಮತ್ತೆ ಶಾಕ್ ನೀಡಲಾಗಿದೆ.
ಬ್ಯಾಂಕುಗಳು ನಿಗದಿಪಡಿಸಿದ ಮೂರು ವ್ಯವಹಾರಗಳು ಉಚಿತವಾಗಿದ್ದು, ಬಳಿಕ ಹಣ ಜಮೆ ಮಾಡಲು ಶುಲ್ಕ ಕಟ್ಟಬೇಕಿದೆ.
ಬ್ಯಾಂಕ್ ಆಫ್ ಬರೋಡಾ ಮೆಟ್ರೋ ನಗರಗಳಲ್ಲಿ ಉಳಿತಾಯ ಖಾತೆದಾರರಿಗೆ ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ನಗದು ಠೇವಣಿ ಇಡಲು ಅವಕಾಶ ಕಲ್ಪಿಸಿದ್ದು ನಂತರ ಪ್ರತಿ ವರ್ಗಾವಣೆಗೆ 50 ರೂ. ಶುಲ್ಕ ಪಾವತಿಸಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹಿರಿಯ ನಾಗರಿಕರಿಗೆ 40 ರೂ. ಶುಲ್ಕ ನಿಗದಿ ಮಾಡಲಾಗಿದೆ. ಇನ್ನು ಈಗಾಗಲೇ ಹಣ ಪಡೆಯಲು 150 ರೂ. ಶುಲ್ಕವನ್ನು ವಿಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 5 ನಗದು ಜಮಾವಣೆ ಉಚಿತವಾಗಿದೆ. ಬಳಿಕ 25 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಕೆನರಾ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿಯವರೆಗೆ ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ನಗದು ಠೇವಣಿ ಇಡಬಹುದು. ನಂತರ ಸಾವಿರ ರೂ.ಗೆ 1 ರೂ.ನಂತೆ ಕನಿಷ್ಠ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ.