ನಾವು ಫಾಸ್ಟ್ ಫುಡ್ ನ್ನು ಯಾಕೆ ತಿನ್ನಬಾರದು ಗೊತ್ತಾ?

fast food
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(20-01-2021):  ಫಾಸ್ಟ್ ಪುಡ್ ಅಗ್ಗವಾಗಿದೆ. ಇದು ಅನುಕೂಲಕರ ಮತ್ತು ವ್ಯಸನಕಾರಿ. ಪ್ರಯಾಣಿಕರು, ಕಾರ್ಮಿಕರು, ಮಕ್ಕಳು ಸೇರಿದಂತೆ ಎಲ್ಲರೂ ಕೂಡ  ಫಾಸ್ಟ್ ಪುಡ್ ಗೆ ಹೆಚ್ಚು ಹೊಂದಿಕೊಂಡಿರುತ್ತಾರೆ. ಹಲವಾರು ಅಧ್ಯಯನಗಳು ನಿರಂತರವಾಗಿ ತ್ವರಿತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ತೋರಿಸಿದೆ. ತ್ವರಿತ ಆಹಾರದಲ್ಲಿ ಅನೇಕ ಅಗತ್ಯ ಪೋಷಕಾಂಶಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಫಾಸ್ಟ್ ಫುಡ್ ನಲ್ಲಿ ಸಾಮಾನ್ಯವಾಗಿ ಸಕ್ಕರೆ, ಉಪ್ಪು, ಸ್ಯಾಚುರೇಟೆಡ್ ಕೊಬ್ಬುಗಳ ಅಂಶಗಳು ಹೆಚ್ಚಾಗಿರುತ್ತದೆ. ತ್ವರಿತ ಆಹಾರವನ್ನು ತಿನ್ನುವುದು ಅಥವಾ ಅತಿಯಾಗಿ ತಿನ್ನುವುದರಿಂದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳು ಬೀರುತ್ತದೆ ಎಂದು ವೈಜ್ಞಾನಿಕ ಸಂಶೋಧನೆಯು ತೋರಿಸಿದೆ.

ಫಾಸ್ಟ್ ಫುಡ್ ಗಳು ಹೆಚ್ಚು ರುಚಿಕರವಾಗಿದೆ ಆದರೆ ಇವುಗಳು ಕಡಿಮೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುತ್ತದೆ, ಅಂದರೆ ಇದು ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳು ಫಾಸ್ಟ್ ಪುಡ್ ಗಳಲ್ಲಿ ಬಹಳ ಕಡಿಮೆ ಇವೆ. ಕಡಿಮೆ ಫೈಬರ್ ಅಂಶಗಳಿರುವ ಆಹಾರವು ಮಲಬದ್ಧತೆ ಮತ್ತು ತೂಕ ಹೆಚ್ಚಾಗುವುದರ ಜೊತೆಗೆ ಕರುಳಿನ ಕ್ಯಾನ್ಸರ್ ವರೆಗಿನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ತ್ವರಿತ ಆಹಾರವನ್ನು ಒಮ್ಮೆ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಅದನ್ನು ಅಭ್ಯಾಸ ಮಾಡುವುದರಿಂದ ವಿಟಮಿನ್ ಕೊರತೆ ಉಂಟಾಗುತ್ತದೆ ಎಂದು  ಪೌಷ್ಟಿಕತಜ್ಞ ಮತ್ತು ಡಯಟ್ ಪೋಡಿಯಂ ಸಂಸ್ಥಾಪಕ ಶಿಖಾ ಮಹಾಜನ್ ಹೇಳಿದ್ದಾರೆ.

ಹೆಚ್ಚಿನ ತ್ವರಿತ ಆಹಾರ ತಿಂಡಿಗಳು  ಸೋಡಾ ಮತ್ತು ಸೈಡ್ ಸ್ನ್ಯಾಕ್ಸ್ ಸೇರಿದಂತೆ ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತವೆ. ಇದು ರಕ್ತದ ಸಕ್ಕರೆ ಅಂಶವನ್ನು ಮತ್ತು ತೂಕವನ್ನು ಹೆಚ್ಚಿಸುತ್ತದೆ. ನಿಮ್ಮ ತೂಕ, ಉಸಿರಾಟದ ಮೇಲೆ ಕೂಡ ಪ್ರಭಾವವನ್ನು ಬೀರುತ್ತದೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು