ನವದೆಹಲಿ(10-12-2020): ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಪಾಕಿಸ್ತಾನ ಮತ್ತು ಚೀನಾ ಪ್ರಚೋದಿಸಿವೆ ಎಂದು ಕೇಂದ್ರ ಸಚಿವ ರೌಸಾಹೇಬ್ ದನ್ವೆ ಹೇಳಿದ್ದಾರೆ.
ಭಾರತದಲ್ಲಿ ಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಆಂದೋಲನಕ್ಕೆ ಕೂಡ ಚೀನಾ ಮತ್ತು ಪಾಕಿಸ್ತಾನ ಪ್ರಚೋದಿಸಿತ್ತು ಎಂದು ಹೇಳಿದ್ದು ಕೇಂದ್ರ ಸಚಿವರ ಅಸಂಬದ್ಧ ಹೇಳಿಕೆಗೆ ಭಾರತೀಯರು ಅಚ್ಚರಿಪಡುವಂತಾಗಿದೆ.
ಕಳೆದ ಎರಡು ವಾರಗಳಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ನರೇಂದ್ರ ಮೋದಿ ಸರ್ಕಾರದ ಹಲವಾರು ನಾಯಕರು ರೈತರನ್ನು “ದಾರಿ ತಪ್ಪಿದವರು” ಎಂದು ಕರೆದಿದ್ದಾರೆ. ರೈತರನ್ನು ಖಲಿಸ್ತಾನಿ ಮತ್ತು ಮಾವೋವಾದಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ರೈತ ಸಂಘಗಳು ಬುಧವಾರ ಕೇಂದ್ರವು ಕಳುಹಿಸಿದ ಲಿಖಿತ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಮೂರು ಕೃಷಿ ಕಾನೂನುಗಳಿಗೆ ಮಾಡಲು ಸಿದ್ಧವಿರುವ ತಿದ್ದುಪಡಿಗಳನ್ನು ವಿವರಿಸಿದೆ.
ಕೃಷಿ ಸಂಘಗಳು ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಯೊಂದಿಗೆ ತಮ್ಮ ಆಂದೋಲನವನ್ನು ಬಲಪಡಿಸುವುದಾಗಿ ಹೇಳಿದರು. ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬಂದ ರೈತರು ದೆಹಲಿ ಗಡಿಯಲ್ಲಿ 15 ದಿನಗಳಿಂದ ಕ್ಯಾಂಪಿಂಗ್ ಮಾಡುತ್ತಿದ್ದಾರೆ. ರೈತರು “ಕರಾಳ ಕಾನೂನುಗಳನ್ನು” ಸರಕಾರ ಹಿಂತೆಗೆದುಕೊಳ್ಳುವವರೆಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.