ರಷ್ಯಾ (21-12-2020): ಕರೊನಾ ಔಷಧ ಸಿದ್ಧಪಡಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದ ವಿಜ್ಞಾನಿಯೊಬ್ಬರು ರಷ್ಯಾದಲ್ಲಿ ನಿಗೂಢವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಅಲೆಕ್ಸಾಂಡರ್ ಸಶಾ ಕಗಾನ್ಸ್ಕಿ(45) ಆತ್ಮಹತ್ಯೆ ಮಾಡಿಕೊಂಡ ವಿಜ್ಞಾನಿ. ಇವರು ಸೇಂಟ್ ಪೀಟರ್ಸ್ಬರ್ಗ್ ನ ವಾಸವಿದ್ದ ಬಿಲ್ಡಿಂಗ್ನ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಇನ್ನು ಮೃತ ದೇಹದ ಮೇಲೆ ಒಳ ಉಡುಪು ಮಾತ್ರ ಕಾಣಿಸಿದೆ. ಇದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೋ ಎನ್ನುವ ಸಂಶಯ ಮೂಡಿಸಿದೆ.