ಸುಶಾಂತ್ ಕೇಸ್; 2 ತಿಂಗಳಲ್ಲಿ 80,000 ನಕಲಿ ಖಾತೆ ಸೃಷ್ಟಿ! ಇವರ ಉದ್ದೇಶವೇನಾಗಿತ್ತು ಗೊತ್ತಾ?

sushanth
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(06-10-2020): ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹರಾಷ್ಟ್ರ ಸರಕಾರ ಮತ್ತು ಮುಂಬೈ ಪೊಲೀಸರನ್ನು ಕೆಟ್ಟದಾಗಿ ಚಿತ್ರೀಕರಿಸಲು, ಪೊಲೀಸರ ಬಗ್ಗೆ ಸುಳ್ಳು ಹೇಳಲು 80,000 ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

ಈ ಕುರಿತ 80,000 ನಕಲಿ ಖಾತೆಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಮುಂಬೈ ಪೊಲೀಸ್ ಸೈಬರ್ ಘಟಕ ಈ ಕುರಿತು ವರದಿಯನ್ನು ಕೂಡ ಸಿದ್ಧಪಡಿಸಿದೆ.

#justiceforsushant , #SSR ಎಂಬ ಹ್ಯಾಶ್ ಟ್ಯಾಗ್‍ಗಳ ಪೋಸ್ಟ್ ಗಳನ್ನು ಇಟಲಿ, ಜಪಾನ್, ಪೋಲೆಂಡ್ ಸ್ಲೊವೇನಿಯಾ, ಇಂಡೊನೇಷ್ಯಾ, ಟರ್ಕಿ, ಥೈಲ್ಯಾಂಡ್, ರೊಮಾನಿಯಾ ಮತ್ತು ಫ್ರಾನ್ಸ್ ದೇಶಗಳಿಂದ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಇನ್ನು ನಕಲಿ ಖಾತೆಗಳನ್ನು ಗುರುತಿಸಿ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸುವಂತೆ ಮುಂಬೈ ಸೈಬರ್ ಘಟಕಕ್ಕೆ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆದೇಶಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು