ಬಿಜೆಪಿಯ ಪರವಾಗಿದ್ದ ಭಾರತದ ಫೇಸ್ಬುಕ್ ಉನ್ನತ ಅಧಿಕಾರಿ ರಾಜೀನಾಮೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಹೊಸದೆಹಲಿ(27/10/2020): ಬಿಜೆಪಿಯ ಪರವಾಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿದ್ದ ಫೇಸ್‌ಬುಕ್ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಫೇಸ್ಬುಕ್ ಸಂಸ್ಥೆ ಇಂದು ತಿಳಿಸಿದೆ.

ಭಾರತದಲ್ಲಿ ಫೇಸ್‌ಬುಕ್‌ ಬಿಜೆಪಿ ಪರವಾಗಿರುವ ಬಗ್ಗೆ ಅಮೆರಿಕದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಸಾಕ್ಷಿ ಸಮೇತ ಬಹಿರಂಗಪಡಿಸಿತ್ತು. ಈ ವೇಳೆ ಅಂಕಿದಾಸ್ ಅವರ ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು.

“ಆಡಳಿತ ಪಕ್ಷದೊಂದಿಗೆ ಕಂಪೆನಿಯ ಸಂಬಂಧ ಹಾಳಾಗಬಾರದೆಂಬ ಉದ್ದೇಶದಿಂದ ಭಾರತದ ಫೇಸ್‌ಬುಕ್‌ನ ಉನ್ನತ ಅಧಿಕಾರಿಯಾಗಿರುವ ಅಂಕಿ ದಾಸ್ ತೆಲಂಗಾಣದ ಹಿಂದೂ ರಾಷ್ಟ್ರವಾದಿ ಸಂಘನೆ, ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ವಿರುದ್ಧ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ವಿರೋಧಿಸಿದ್ದರು” ಎಂದು ಪತ್ರಿಕೆ ವರದಿ ಮಾಡಿತ್ತು.

ಕೇಂದ್ರದ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಇದೇ ವಿಚಾರವಾಗಿ ಅಂಕಿದಾಸ್‌ ಅವರನ್ನು ವಿಚಾರಣೆಗೂ ಒಳಪಡಿಸಿತ್ತು. ಇದಾದ ಮರುದಿನವೇ ಅಂಕಿದಾಸ್‌ ಅವರು ಪದತ್ಯಾಗ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು