ಫೇಸ್ಬುಕ್’ ಕಂಪನಿಗೆ ‘ಮೆಟಾ’ ಎಂದು ಹೆಸರು ಬದಲಾವಣೆ: ಸಿಇಒ ಮಾರ್ಕ್ ಜುಕರ್ ಬರ್ಗ್ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಓಕ್ ಲ್ಯಾಂಡ್: ಫೇಸ್‌ಬುಕ್ ಕಾರ್ಪೊರೇಟ್ ಕಂಪನಿಯ ಹೆಸರನ್ನು ಬದಲಾಯಿಸಲಾಗಿದೆ. ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ಇನ್ಮುಂದೆ “ಮೆಟಾ” ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಸಂಸ್ಥಾಪಕ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದಾರೆ.

ಮೆಟಾ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ, ಸಾಮಾಜಿಕ ವಿಷಯಗಳ ಜತೆಗಿನಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ ಎಂದು ಅವರು, ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ತಿಳಿಸಿದ್ದಾರೆ.

ಆದರೆ ನಮ್ಮ ಅಪ್ಲಿಕೇಷನ್‌ಗಳು ಹಾಗೂ ಅವರ ಬ್ರ್ಯಾಂಡ್‌ಗಳು ಬದಲಾಗುತ್ತಿಲ್ಲ. ಕಂಪನಿಯು ತನ್ನ ಮಾರುಕಟ್ಟೆ ಶಕ್ತಿ, ಅದರ ಅಲ್ಗಾರಿದಮಿಕ್ ನಿರ್ಧಾರಗಳು ಮತ್ತು ಅದರ ಪ್ಲಾಟ್‌ಫಾರ್ಮ್‌ಗಳಲ್ಲಿನ ದುರುಪಯೋಗಗಳ ಪೋಲೀಸಿಂಗ್‌ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವಾಗ ಈ ಹೆಸರು ಬದಲಾವಣೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೆಟಾವರ್ಸ್ ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತು ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಡಲಿದೆ ಎಂದಿದ್ದಾರೆ. ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದರು, ಕಾಲಾಂತರದಲ್ಲಿ ನಾವು ಮೆಟಾವರ್ಸ್ ಕಂಪನಿಯಾಗಿ ಬದಲಾವಣೆಯಾಗುವ ಭರವಸೆ ಇದೆ ಎಂದರು ಜುಕರ್ ಬರ್ಗ್ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು