ನಿಮ್ಮ ಕಣ್ಣಿನ ರಕ್ಷಣೆಗೆ ಈ ರೀತಿ ಮಾಡಿ

eye
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಣ್ಣಿನ ಸಮಸ್ಯೆ ಈಗ ಹೆಚ್ಚಿನ ಜನರಲ್ಲಿ ಕಾಣಿಸುತ್ತಿದೆ. ವಯಸ್ಸಾದವರಲ್ಲಿ  ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ ಯುವ ಸಮುದಾಯ ಕೂಡ ಇವತ್ತು ದೃಷ್ಟಿದೋಷ ಸಮಸ್ಯೆಗೆ ಬೇಗನೆ ಒಳಗಾಗುತ್ತಾರೆ. ಇದನ್ನು ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ದೃಷ್ಟಿ ದೋಷದಿಂದ ನಮ್ಮನ್ನು ನಾವು ರಕ್ಷಿಸಬಹುದಾಗಿದೆ.

ಮುಖ್ಯವಾಗಿ ಕಣ್ಣಿನ ಪೊರೆ ಸಹಜವಾಗಿ ಎಲ್ಲರಿಗೂ ಕಾಡುವಂತಹ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮನುಷ್ಯನಿಗೆ ವಯಸ್ಸಾಗುತ್ತಾ ಹೋದ ಹಾಗೆ ದೃಷ್ಟಿ ಮಂಜಾಗುತ್ತ ಹೋಗುತ್ತದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಸೇವಿಸುವ ಆಹಾರದಲ್ಲಿಯೂ ಪೌಷ್ಠಿಕಾಂಶ ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು. ಇವು ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ.

ಕಾಲಕಾಲಕ್ಕೆ ವೈದ್ಯರ ಬಳಿ ಹೋಗಿ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು

ವೈದ್ಯರು ಸೂಚಿಸುವ ಕನ್ನಡಕವನ್ನ ಮಾತ್ರ ಧರಿಸಬೇಕು.

ಬಿಸಿಲಿನಿಂದ ರಕ್ಷಿಸುವ ಕನ್ನಡಕವನ್ನ ಬಳಸಬೇಕು

ಸಮಯಕ್ಕೆ ಸರಿಯಾಗಿ ಆಹಾರದ ಸೇವನೆ ಉತ್ತಮ. ಧೂಮಪಾನ ಹಾಗೂ ಮದ್ಯಪಾನದಿಂದ ದೂರ ಇರಬೇಕು.

ಧೂಳು ಹಾಗೂ ಬೇರೆ ಬೇರೆ ಕಲ್ಮಶಗಳು ಕಣ್ಣಿಗೆ ಸೇರದಿರುವಂತೆ ನೋಡಿಕೊಳ್ಳಬೇಕು.

ಅತಿಯಾದ ಬಿಸಿಲು, ಬೆಳಕು ಕಣ್ಣಿಗೆ ಒಳ್ಳೆಯದಲ್ಲ

ಕಣ್ಣಿಗೆ ಆದಷ್ಟು ವಿಶ್ರಾಂತಿ ಕೊಡಲು ಚೆನ್ನಾಗಿ ನಿದ್ದೆ ಮಾಡಬೇಕು.

ಇಂದಿನ ಯುವ ಸಮುದಾಯ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ್ ಕಣ್ಣಿನ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದಕ್ಕೆ ನಿಮ್ಮ ಮೊಬೈಲ್ ನಲ್ಲಿ ಬ್ರೈಟ್ ನೆಸ್ ಕಡಿಮೆ ಇಟ್ಟುಕೊಳ್ಳಬೇಕು. ನೈಟ್ ಶೀಲ್ಡ್ ಆಯ್ಕೆಯನ್ನು ಇಟ್ಟುಕೊಳ್ಳಬೇಕು. ಕತ್ತಲಿನಲ್ಲಿ ಮೊಬೈಲ್ ಬಳಕೆಯನ್ನು ಮಾಡಬಾರದು. ಹೆಚ್ಚಿನ ಸಮಯ ಮೊಬೈಲ್ ನಿಂದ ದೂರ ಇರುವ ಪ್ರಯತ್ನವನ್ನು ಮಾಡಬೇಕು.ಮೊಬೈಲ್ ಬಳಕೆ ವೇಳೆ ಸೇಪ್ಟಿ ಕನ್ನಡಕಗಳನ್ನು ಬಳಕೆ ಮಾಡಿದರೆ ಇನ್ನೂ ಒಳ್ಳೆಯದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು