ಮಸ್ಕತ್(10-11-2020): ಉದ್ಯೋಗ ವೀಸಾದ ಅವಧಿ ಮುಗಿದರೂ, ತಾಯ್ನಾಡಿಗೆ ಹೋಗದೇ ಒಮನಿನಲ್ಲಿ ವಾಸಿಸುತ್ತಿರುವವರಿಗೆ ದಂಡ ರಹಿತವಾಗಿ ಸ್ವದೇಶಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 15 ರಿಂದ ಡಿಸೆಂಬರ್ 31ರ ವರೆಗೆ ಈ ಅವಕಾಶ ಲಭ್ಯವಾಗಲಿದೆ.
ಅವಧಿ ಮುಗಿದ ಪಾಸ್ಪೋರ್ಟ್ಗಳನ್ನು ಹೊಂದಿದವರು, ಅಯಾ ದೇಶದ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಬೇಕೆಂದು ಸರಕಾರೀ ಪ್ರಕಟಣೆ ತಿಳಿಸಿದೆ. ಜೊತೆಗೆ ಪ್ರಯಾಣಕ್ಕೆ ಅಗತ್ಯವಾದ ದಾಖಲೆಗಳು, ಟಿಕೇಟು, ಕೊರೋನಾ ನೆಗೆಟಿವ್ ಪ್ರಮಾಣಪತ್ರ ಇತ್ಯಾದಿಗಳನ್ನೂ ವ್ಯವಸ್ಥೆಗೊಳಿಸಬೇಕೆಂದು ಸೂಚಿಸಿದೆ.
ಪ್ರಯಾಣಕ್ಕೆ ಬೇಕಾದ ಇತರ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಮಸ್ಕತ್ ವಿಮಾನ ನಿಲ್ದಾಣದಲ್ಲಿರುವ ಲೇಬರ್ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.