ಶೋಪಿಯನ್; ಎನ್ ಕೌಂಟರ್ ನಲ್ಲಿ ಹತ್ಯೆ ಗೀಡಾದ ಮುಸ್ಲಿಂ ಯುವಕರ ಶವಗಳನ್ನು ಸ್ಮಶಾನದಿಂದ ತೆಗೆದು  70ದಿನಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಮ್ಮು(03-10-2020): ಶೋಪಿಯನ್ ಎನ್‌ಕೌಂಟರ್ ಸಂತ್ರಸ್ತರ ದೇಹಗಳು 70 ದಿನಗಳ ನಂತರ  ಹೊರತೆಗೆಯಲ್ಪಟ್ಟಿದ್ದು, ಕೊನೆಯ ವಿಧಿಗಳಿಗಾಗಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಜುಲೈ 18 ರಂದು ನಡೆದ ಎನ್ ಕೌಂಟರ್ ಗೆ ಬಲಿಯಾಗಿದ್ದ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಉತ್ತರ ಕಾಶ್ಮೀರ ಬಾರಾಮುಲ್ಲಾ ಜಿಲ್ಲೆಯ ಗಂತಮುಲ್ಲಾ ಪ್ರದೇಶದ ಸ್ಮಶಾನದಿಂದ ಅಂತ್ಯಸಂಸ್ಕಾರ ನಡೆಸಿದ 70ದಿನಗಳ ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ.

ಶೋಪಿಯಾನ್ ಜಿಲ್ಲೆಗೆ ಕಾರ್ಮಿಕರಾಗಿ ಕೆಲಸ ಮಾಡಲು ಬಂದಿದ್ದ ಇವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಉಗ್ರರಂತೆ ರೂಪಿಸಿ ಕೊಂದಿದ್ದಾರೆ ಎಂದು ಮೃತರ ಸಂತ್ರಸ್ತರು ಆರೋಪಿಸಿದ್ದಾರೆ.

ಹತ್ಯೆಗೀಡಾದ ಮೂವರು ಯುವಕರೊಂದಿಗೆ ಅವರ ಡಿಎನ್‌ಎ ಮಾದರಿಗಳು ಹೊಂದಿಕೆಯಾದ ನಂತರ ಕುಟುಂಬವನ್ನು ದೃಡೀಕರಿಸಲಾಗಿದೆ.ಆದ್ರೆ, ಹತ್ಯೆಗೀಡಾದ ವ್ಯಕ್ತಿಗಳ ಉಗ್ರ ಸಂಪರ್ಕವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ಪೊಲೀಸರು ಪತ್ತೆ ಮಾಡಲಿಲ್ಲ.

ಈ ಬಗ್ಗೆ ಭದ್ರತಾ ಪಡೆಗಳ ಮಾಹಿತಿದಾರರಾಗಿ ಕಾರ್ಯನಿರ್ವಹಿಸಿದ ಮೂವರು ಸ್ಥಳೀಯರನ್ನು ಸಹ ಸೇನೆಯ ವಿಚಾರಣಾ ನ್ಯಾಯಾಲಯ ಪ್ರಶ್ನಿಸಿದೆ.ಎನ್‌ಕೌಂಟರ್‌ನಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು