ದಾವಣಗೆರೆ (04-12-2020): ಶಿವಮೊಗ್ಗದಲ್ಲಿ ಮುಸ್ಲಿಮರ ಗೂಂಡಾಗಿರಿ ಮತ್ತೆ ಪ್ರಾರಂಭವಾಗಿದೆ, ಹಿಂದೂ ಯುವಕರು ಶಿವಮೊಗ್ಗದಲ್ಲಿ ಮಾಡಿದ್ದರಲ್ಲಿ ತಪ್ಪೇನಿದೆ? ಮುಸ್ಲಿಂ ಗೂಂಡಾಗಳಿಗೆ ಸಮುದಾಯದ ಮುಖಂಡರು ಬುದ್ದಿ ಕಲಿಸಿಲ್ಲಾ ಎಂದಾದರೆ ನಮ್ಮ ಸರಕಾರ ಬುದ್ದಿ ಕಲಿಸುತ್ತದೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾದ್ಯಮದ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬಜರಂಗದಳದ ಸಂಚಾಲಕ ನಾಗೇಶ್ ಮೇಲೆ ಮಸುಕು ದಾರಿಗಳು ಗೂಂಡಾಗಿರಿ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ನಾನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದ್ದೇನು. ತಕ್ಷಣ ಆರೋಪಿಗಳನ್ನು ಪತ್ತೆಮಾಡಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಹಿಂದೂ ಸಮಾಜ ಎಷ್ಟು ತಡೆದುಕೊಳ್ಳಬೇಕೋ ಅಷ್ಟು ತಡೆದುಕೊಳ್ಳುತ್ತದೆ. ಮುಸ್ಲಿಂ ಸಮಾಜದ ದುಷ್ಟ ಶಕ್ತಿಗಳಿಗೆ ಶಿವಮೊಗ್ಗ ಶಾಂತವಾಗಿರಬೇಕಿಲ್ಲ. ನಾಗೇಶ್ ಗೋ ಹತ್ಯೆ ತಡೆಯಲು ಪ್ರಯತ್ನಿಸುತ್ತಿದ್ದ ಯುವಕ. ಮುಸ್ಲಿಂ ಗೂಂಡಾಗಳಿಗೆ ಆ ಸಮುದಾಯದ ಮುಖಂಡರೇ ಬುದ್ಧಿ ಹೇಳಿ ಶಿಕ್ಷೆ ಕೊಡಬೇಕು ಎಂದು ಹೇಳಿದ್ದಾರೆ.
ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ ಅಷ್ಟೇ. ಗೂಂಡಾಗಿರಿಗೆ ಪ್ರತಿಯಾಗಿ ಗೂಂಡಾಗಿರಿ ನಡೆದಿದೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ತಹಸೀಲ್ದಾರ್ಗೆ ತಲೆ ಸರಿಯಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.