ಬೆಳಗಾವಿ(28-11-2020): ಬೆಳಗಾವಿ ಲೋಕಸಭೆಗೆ ಉಪಚುನಾವಣೆಗೆ ಬಿಜೆಪಿಯಿಂದ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬೆಳಗಾವಿ ಹಿಂದುತ್ವದ ಕೇಂದ್ರ. ನಾವು ಮುಸ್ಲಿಂರಿಗೆ ಮಾತ್ರ ಕೊಡಲ್ಲ. ಹಿಂದುತ್ವವಾದಿಗೆ ಲೋಕಸಭೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಟಿಕೆಟ್ ಹಂಚಿಕೆ ಬಗ್ಗೆ ನಾವೆಲ್ಲರೂ ಕುಳಿತು ಚರ್ಚೆಯನ್ನು ಮಾಡುತ್ತೇವೆ. ಆ ಬಳಿಕ ಸೂಕ್ತ ಅಭ್ಯರ್ಥಿಗೆ ಕೊಡುತ್ತೇವೆ. ಆದರೆ ಟಿಕೆಟ್ ಮಾತ್ರ ಹಿಂದುಗಳಿಗೆ ಕೊಡುತ್ತೇವೆ ಈ ಕುರಿತು ಡಿ.4ರ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಈಶ್ವರಪ್ಪ ಹೇಳಿದ್ದಾರೆ.