ಎರಡು ದಶಕಗಳ ಸುಧೀರ್ಘ ಯುದ್ಧ ಕೊನೆಯಾಗುವತ್ತ… | ಅಫ್ಘಾನಿಸ್ತಾನದಿಂದ ಅಮೇರಿಕಾ ಸೈನ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲಿರುವ ಬೈಡನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್, ಡಿಸಿ: ಸುಧೀರ್ಘ ಎರಡು ದಶಕಗಳ ಅಫ್ಘಾನ್ ಯುದ್ಧ ಕೊನೆಯ ಹಂತದಲ್ಲಿದೆ. ಅಫ್ಘಾನಿಸ್ತಾನದಿಂದ ಅಮೇರಿಕ್ ಸೈನ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಬೈಡನ್ ನಿರ್ಧರಿಸಿದ್ದಾರೆ.

ಸುಧೀರ್ಘ ಯುದ್ಧವನ್ನು ಇನ್ನಷ್ಟು ಕಾಲ ಮುಂದುವರೆಸಿಕೊಂಡು ಹೋಗಲು ನ್ಯಾಯೋಚಿತ ಕಾರಣಗಳೇನೂ ಇಲ್ಲ. ಸೆಪ್ಟಂಬರ್ ಹನ್ನೊಂದನೇ ತಾರೀಖಿನಂದು ಅಫ್ಘಾನಿಸ್ತಾನದಿಂದ ಸೈನ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಬೈಡನ್ ಹೇಳಿದ್ದಾರೆ.

ಅದೇ ವೇಳೆ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡರೂ ಅಫ್ಘಾನ್ ಸರಕಾರಕ್ಕೆ ಮಾನವೀಯ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸಲಿದ್ದೇವೆ. ಆದರೆ ಸೈನಿಕ ಸಹಾಯ ಇನ್ನು ಮುಂದೆ ಇರುವುದಿಲ್ಲ ಎಂದು ಜೋ ಬೈಡನ್ ಸ್ಪಷ್ಠಪಡಿಸಿದ್ದಾರೆ.

2001 ಸೆಪ್ಟಂಬರಿನಲ್ಲಿ ಅಮೇರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡದ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು. ಇದರ ಇಪ್ಪತ್ತನೇ ವರ್ಷಾಚರಣೆಯೂ ವರ್ಷ ನಡೆಯಲಿದೆ. ವಾಣಿಜ್ಯ ಕಟ್ಟಡಗಳ ಮೇಲಿನ ದಾಳಿಯನ್ನು ಖಚಿತಪಡಿಸಿದ ಶ್ವೇತ ಭವನದ ಅದೇ ಕೋಣೆಯಲ್ಲಿಯೇ, ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರವೂ ಪ್ರಸಾರವಾಗಲಿದೆಯೆಂದು ವರದಿಯಾಗಿದೆ. ಸದ್ಯ ಮೂರುವರೆ ಸಾವಿರ ಅಮೇರಿಕನ್ ಸೈನಿಕರು ಅಫ್ಘಾನಿನಲ್ಲಿ ತಂಗಿದ್ದಾರೆ.

ದಶಕಗಳೆರಡು ಕಳೆದರೂತಾಲಿಬಾನಿಗಳ ಆಕ್ರಮಣಶೀಲ ಗುಣದಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ನ್ಯಾಟೋಯುಎಸ್ ಸೈನ್ಯದ ಅಧಿಕಾರಿಗಳು ಹೇಳಿದ್ದಾರೆ. ಅಮೇರಿಕದ ಸೈನ್ಯವು ಹಿಂದಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕಾಬೂಲಿನಲ್ಲಿ ತಾಲಿಬಾನಿಗಳೊಂದಿಗೆ ಶಾಂತಿ ಮಾತುಕತೆ ನಡೆಸುವೆವು ಎಂದು ಅಫ್ಘಾನಿಸ್ತಾನದ ಮುಖಂಡರು ತಿಳಿಸಿದ್ದಾರೆ.

ಸೈನ್ಯವನ್ನು ಹಿಂದೆಗೆದುಕೊಳ್ಳುವ ಅಮೇರಿಕಾದ ತೀರ್ಮಾನವನ್ನು ಗೌರವಿಸುತ್ತಿರುವುದಾಗಿ ತಿಳಿಸಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ದೇಶಕ್ಕೂ, ದೇಶದ ಜನರಿಗೂ ರಕ್ಷಣೆ ನೀಡುವ ಸಾಮರ್ಥ್ಯ ಅಫ್ಘಾನ್ ಸೈನ್ಯಕ್ಕೆ ಇದೆಯೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು