ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‍ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದ ನೀತಿ ಆಯೋಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಶಿಫಾರಸು ಮಾಡಿದೆ.

ಒಕ್ಕೂಟ ಸರಕಾರದ ಬಜೆಟಿನಲ್ಲಿ ಖಾಸಗೀಕರಣ ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿತ್ತು. ಅದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ 2020-21 ಆರ್ಥಿಕ ವರ್ಷದಲ್ಲಿ ಎರಡು ಸರಕಾರೀ ಬ್ಯಾಂಕುಗಳನ್ನು ಮತ್ತು ಒಂದು ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನೂ ಖಾಸಗೀಕರಣ ಮಾಡುವ ಬಗ್ಗೆ ಹೇಳಿದ್ದರು.

ಸರಕಾರದ ಹೊಸ ನೀತಿಯಾದಆತ್ಮ ನಿರ್ಭರ್ ಭಾರತ ಅನ್ವಯ ಖಾಸಗೀಕರಣದ ಬಗೆಗೆ ನಿರ್ದೇಶನಗಳನ್ನು ನೀಡುವ ಹೊಣೆನೀತಿ ಆಯೋಗ ಮೇಲಿದೆ.  ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸೊತ್ತು ನಿರ್ವಹಣೆ ಇಲಾಖೆ ಹಾಗೂ ಆರ್ಥಿಕ ಸೇವಾ ಇಲಾಖೆಗಳು ನೀತಿ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ, ಅದನ್ನು ಜಾರಿಗೊಳಿಸುವ ಬಗ್ಗೆ ಕಾನೂನಾತ್ಮಕ ಸಲಹೆ ನೀಡಲಿದೆ.

ಹಾಲಿ ಆರ್ಥಿಕ ವರ್ಷದಲ್ಲಿ ಶೇರುಗಳ ಮಾರಾಟದಿಂದ 1.75 ಲಕ್ಷ ಕೋಟಿಗಳನ್ನು ಗಳಿಸುವ ಇರಾದೆಯನ್ನು ಒಕ್ಕೂಟ ಸರಕಾರವು ಹೊಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು