ಏನಿದು ಅತ್ತಾಲ ಕೊಟ್ಟಿ!? | ಕಾಲ ಗರ್ಭದಲ್ಲಿ ಯಾಕೆ ಮರೆಯಾಗಿ ಹೋಯಿತು?

Share on facebook
Share on twitter
Share on linkedin
Share on whatsapp
Share on telegram
Share on email
Share on print

– ಇಸ್ಮತ್ ಪಜೀರ್, ಯುವ ಬರಹಗಾರರು

ಅತ್ತಾಲ ಎಂದರೆ ಸಹರಿ. ಉಪವಾಸಿಗರು ಮುಂಜಾವಿನ ಆಝಾನ್‌ಗಿಂತ ಮುನ್ನ ತೆಗೆದುಕೊಳ್ಳುವ ಉಪಹಾರ. ಸಾಮಾನ್ಯವಾಗಿ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಸಹರಿ ಉಣ್ಣುತ್ತಾರೆಅದಕ್ಕೆ ಬ್ಯಾರಿ ಭಾಷೆಯಲ್ಲಿ ಅತ್ತಾಲ ಎನ್ನುತ್ತಾರೆ.

ಅತ್ತಾಲ ಎನ್ನುವುದು ಒಂದು ಧಾರ್ಮಿಕ ಆಚರಣೆಯಾದರೂ ಒಂದೊಮ್ಮೆ ನಮ್ಮ ಕರಾವಳಿ ಕರ್ನಾಟಕದ ಬ್ಯಾರಿ ಮುಸ್ಲಿಮರಲ್ಲಿ ಅದಕ್ಕೊಂದು ಸಾಂಸ್ಕೃತಿಕ ಸ್ಪರ್ಶವಿತ್ತು. ಈಗ ಆಧುನಿಕತೆಯ ಭರಾಟೆಯಲ್ಲಿ ಅತ್ತಾಲ ಮತ್ತೆ ಒಂದು ಧಾರ್ಮಿಕ ಪ್ರಕ್ರಿಯೆಯಾಗಿಯೇ ಮನೆಯೊಳಕ್ಕೆ ಸೇರಿಬಿಟ್ಟಿದೆ.

ಅತ್ತಾಲಕೊಟ್ಟಿ ಹಾಗೆಂದರೇನು?

ರಮಝಾನ್ ತಿಂಗಳಲ್ಲಿ ಮಧ್ಯರಾತ್ರಿ ಸರಿದು ಮುಂಜಾನೆಯಾಗುವುದಕ್ಕಿಂತ ಮುಂಚಿನ ಹೊತ್ತಲ್ಲಿ ಸಹರಿ ಅಥವಾ ಅತ್ತಾಲಉಣ್ಣುವುದು ಇಸ್ಲಾಮೀ ಧಾರ್ಮಿಕ ಪದ್ಧತಿಯಾಗಿದೆ. ಅತ್ತಾಲ ಉಣ್ಣುವುದನ್ನು ಮುಂಜಾವಿನ ಫಜ್ರ್ ಆಝಾನಿ‌ಗಿಂತ ಮುಂಚೆ ಮುಗಿಸಬೇಕು.

ರಮಝಾನ್ ತಿಂಗಳಲ್ಲಿ ಹಗಲು ಹೊತ್ತಲ್ಲಿ ಹೊಟ್ಟೆಗೆ ನೀರು ಹಾಕದೇ ದುಡಿಯುವ ಜನಕ್ಕೆ ಇಫ್ತಾರ್‌ ( ಉಪವಾಸ ಪಾರಣೆ)ಗೆ ಹೊಟ್ಟೆ ತುಂಬಾ ತಿಂದು ಮತ್ತೆ ತರಾವೀಹ್ ಎಂಬ ರಮಝಾನಿನ ವಿಶೇಷ ಪ್ರಾರ್ಥನೆಗೈದು ಮತ್ತೆ ರಾತ್ರಿಯ ಉಪಹಾರವುಂಡು ಮಲಗುವಾಗ ರಮಝಾನೇತರ ದಿನಗಳಿಗಿಂತ ಬಹಳ ತಡವಾಗುತ್ತದೆ. ದಣಿದ ದೇಹಕ್ಕೆ ಒಮ್ಮೆ ನಿದ್ರೆಹತ್ತಿದರೆ ಮತ್ತೆ ಸೂರ್ಯೋದಯಕ್ಕಿಂತ ಮುಂಚೆ ಎಚ್ಚರವಾಗಬೇಕಾದರೆ ಯಾರಾದರೂ ಎಬ್ಬಿಸಬೇಕು.

ಹಾಗೆ ಅತ್ತಾಲಕ್ಕೆಂದು ಎಬ್ಬಿಸಲೆಂದೇ ಕೆಲ ಬ್ಯಾರಿ ಮೊಹಲ್ಲಾಗಳಲ್ಲಿ ಯುವಕರು ಒಂದು ತಂಡ ಕಟ್ಟಿ ಕೈಯಲ್ಲಿ ಒಂದು ದೀಪ ಹಿಡಿದುಕೊಂಡು ರಮಝಾನ್ ತಿಂಗಳ ರಾತ್ರಿಗಳಲ್ಲಿ ದಫ್ ಬಾರಿಸುತ್ತಾ ಹಾಡು ಹಾಡುತ್ತಾ ಅತ್ತಾಲದ ಹೊತ್ತು ತಿರುಗಾಡುತ್ತಾರೆ.‌ ಅವರೇ ಅತ್ತಾಲ ಕೊಟ್ಟಿಗಳು..

ಏನಿದು ಕೊಟ್ಟಿ ?

ಈಗಾಗಲೇ ಅತ್ತಾಲ ಎಂದರೇನೆಂದು ವಿವರಿಸಿದ್ದೇನೆಅತ್ತಾಲ ಕೊಟ್ಟಿ ಅಥವಾ ಕೆಲವರು ಅತ್ತಾಲ ಕೋಟಿ ಎಂದೂ ಹೇಳುತ್ತಾರೆ. ಕೋಟಿ ಎನ್ನುವುದು ಸರಿಯಾದ ಶಬ್ಧವಲ್ಲ. ಅತ್ತಾಲ ಕೊಟ್ಟಿಗಳು ದಫ್ ಅಥವಾ ದಾಯಿರ ಬಾರಿಸುತ್ತಾ ತಿರುಗಾಡುತ್ತಾರೆ. ಬಾರಿಸುವುದಕ್ಕೆ/ ಬಡಿಯುವುದಕ್ಕೆ ಬ್ಯಾರಿ ಭಾಷೆಯಲ್ಲಿಕೊಟ್ಟುರೆಎನ್ನುತ್ತಾರೆ ದಫ್ ಕೊಟ್ಟುವವರುಕೊಟ್ಟಿಗಳಾಗಿದ್ದಾರಷ್ಟೆ.

ಸಾಮಾನ್ಯವಾಗಿ ಬ್ಯಾರಿ ಮುಸ್ಲಿಮರೇ ತುಂಬಿರುವ ಬೀದಿಗಳಲ್ಲಿ ಅತ್ತಾಲ ಕೊಟ್ಟಿ‌ಗಳು ತಿರುಗಾಡಿ ಹಾಡುತ್ತಿದ್ದರು. ಅದರಲ್ಲಿ ಬ್ಯಾರಿ ಭಾಷೆಯ ಧಾರ್ಮಿಕ ಹಾಡುಗಳು, ಮಲಯಾಳಂ ಧಾರ್ಮಿಕ ಹಾಡುಗಳು ಮತ್ತು ಅರಬಿಕ್ ಹಾಡುಗಳೂ ಇರುತ್ತಿದ್ದವು.‌ ನಿರ್ದಿಷ್ಟವಾಗಿ ಇಂತಹುದೇ ಹಾಡು ಹಾಡಬೇಕೆಂಬ ನಿಯಮವಿರಲಿಲ್ಲ. ತೀರಾ ಧಾರ್ಮಿಕ ಚೌಕಟ್ಟು ಮೀರದ ಹಾಡಾಗದಿದ್ದರಾಯಿತು.

ಅತ್ತಾಲ ಕೊಟ್ಟಿಗಳು ಪ್ರತೀ ಮನೆಗಳಿಗೆ ಹೋಗಿ ಎಬ್ಬಿಸಬೇಕೆಂದಿರಲಿಲ್ಲ. ಮೊಹಲ್ಲಾದ ಬೀದಿಗಳಲ್ಲಿ ಹಾಡುತ್ತಾ ಹೋಗುವಾಗ ಸಹಜವಾಗಿಯೇ ಜನ ಎಚ್ಚರಗೊಳ್ಳುತ್ತಾರೆ.

ರಮಝಾನ್ ತಿಂಗಳ ಇಪ್ಪತ್ತೇಳನೇ ದಿನದಂದು ಇವರು ಯಾವ ಮೊಹಲ್ಲಾಗಳಲ್ಲಿ ತಿರುಗಾಡಿದ್ದರೋ ಮೊಹಲ್ಲಾಗಳ ಮನೆಗಳಿಗೆ ಹಗಲು ಹೊತ್ತು ಹಾಡುತ್ತಾ ಹೋಗುತ್ತಾರೆ. ಮನೆಗಳವರು ಅಕ್ಕಿ, ತೆಂಗಿನಕಾಯಿ ಮತ್ತು ಒಂದಷ್ಟು ದುಡ್ಡು ಕೊಟ್ಟು ಕಳುಹಿಸುತ್ತಾರೆ. ಕೆಲವು ಮಸೀದಿಗಳಲ್ಲೂ ಅತ್ತಾಲ ಕೊಟ್ಟಿಗಳಿಗೆ ಸಂಭಾವನೆ ನೀಡಲೆಂದೇ ಊರವರಿಂದ ದುಡ್ಡು ಸಂಗ್ರಹಿಸುತ್ತಿದ್ದರಂತೆ. ಒಂದು ಕಾಲಕ್ಕೆ ಬ್ಯಾರಿಗಳಲ್ಲಿ ಇದೊಂದು ಮಹತ್ವದ ಸಾಂಸ್ಕೃತಿಕ ಆಚರಣೆಯಾಗಿ ಜಾರಿಯಲ್ಲಿತ್ತು.

ಅತ್ತಾಲ ಕೊಟ್ಟು ಎಂಬ ಆಚರಣೆ ಜಾರಿಯಲ್ಲಿದ್ದದ್ದು ಹೆಚ್ಚಾಗಿ ಪೇಟೆ ಪ್ರದೇಶಗಳಲ್ಲಾಗಿತ್ತು. ಹಳ್ಳಿಗಳ ಕಾಲು ದಾರಿಗಳು, ಏರು ತಗ್ಗು ದಾರಿಗಳು, ಗದ್ದೆ ಹುಣಿಗಳಲ್ಲೆಲ್ಲಾ ಅಪರಾತ್ರಿ ಹೊತ್ತು ದಫ್ ಬಾರಿಸುತ್ತಾ ಹಾಡಿ ತಿರುಗಾಡುವುದು ಸುಲಭದ ಕೆಲಸವೇನಲ್ಲ.

ಅತ್ತಾಲ ಕೊಟ್ಟುಯಾಕೆ ಕಣ್ಮರೆಯಾಯಿತು?

ಸಹಜವಾಗಿಯೇ ಆಧುನಿಕತೆಯ ಭರಾಟೆ ಅತ್ತಾಲ ಕೊಟ್ಟಿ ಆಚರಣೆಯನ್ನು ಕಣ್ಮರೆಯಾಗಿಸಿತು. ವಿದ್ಯುಚ್ಛಕ್ತಿ ಬಂದ ಮೇಲೆ ಮಸೀದಿಗಳಿಗೆ ಧ್ವನಿ ವರ್ಧಕ ಬಂತು. ಧ್ವನಿ ವರ್ಧಕದ ಆಗಮನವಾಗುತ್ತಲೇ ಅತ್ತಾಲದ ಹೊತ್ತಲ್ಲಿ ಮಸೀದಿಯಮುಕ್ರಿಕಧ್ವನಿ ವರ್ಧಕ ಬಳಸಿ ಧಾರ್ಮಿಕ ಹಾಡು ಹಾಡುತ್ತಾ ಊರವರನ್ನು ಅತ್ತಾಲಕ್ಕೆ ಎಬ್ಬಿಸತೊಡಗಿದರು. ಆದರೆ ಇದು ಹೆಚ್ಚು ಪರಿಣಾಮಕಾರಿಯಾಗಲಿಲ್ಲ.

ಬಳಿಕ ಟೈಂ ಪೀಸ್‌ನಲ್ಲಿ ಅಲಾರಂ ಇಟ್ಟು ಜನ ಅತ್ತಾಲಕ್ಕೆ ಎದ್ದೇಳತೊಡಗಿದರು. ಮೊಬೈಲ್ ಫೋನ್ ಬಂದಾಗಿನಿಂದ ಪ್ರತಿಯೊಬ್ಬರೂ ಅಲಾರಾಂ ಇಟ್ಟು ಏಳುವುದು ಸರ್ವೇ ಸಾಮಾನ್ಯವಾಯಿತು. ತಮ್ಮ ಅಗತ್ಯ ಇಲ್ಲದಾದಾಗ ಸಹಜವಾಗಿಯೇ ಅತ್ತಾಲ ಕೊಟ್ಟಿಗಳು ಹಿಂದೆ ಸರಿದರು. ಈಗಿನ ಕಾಲದ ಯುವಕರಲ್ಲಿ ಅಪರಾತ್ರಿ ಅತ್ತಾಲ ಕೊಟ್ಟಿಯೆಂದು ತಿಂಗಳ ಕಾಲ ತಿರುಗಾಡಲು ಯಾರು ಸಿಗುತ್ತಾರೆ? ಮತ್ತೆ ಯುವಕರು ಮನೆ ಮನೆಗೆ ಹೋಗಿ ಸಂಭಾವನೆ ಪಡೆಯುವಂತಹ ಕೆಲಸಮಾಡಬಲ್ಲರೇ?

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು