ಬೆಂಗಳೂರು(01-02-2021): ತುರ್ತು ಸಹಾಯವಾಣಿ ಸಂಖ್ಯೆ ಬದಲಾಗಿದ್ದು ಇನ್ಮುಂದೆ ದೇಶದಾದ್ಯಂತ ಎಲ್ಲಾ ಸೇವೆಗಳು ಒಂದೇ ನಂಬರ್ ಅಡಿಯಲ್ಲಿ ಲಭ್ಯವಾಗಲಿದೆ.
ಪೊಲೀಸ್, ಅಗ್ನಿಶಾಮಕ, ಆರೋಗ್ಯ ಸೇರಿ ಎಲ್ಲಾ ತುರ್ತು ತುರ್ತು ಸೇವೆಗಳು ದೇಶದೆಲ್ಲೆಡೆ ಒಂದೇ ನಂಬರ್ ನಲ್ಲಿ ಸಿಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ 112 ಸಂಖ್ಯೆ ಜಾರಿಯಾಗಿದೆ.
ಈ ಹಿಂದೆ ತುರ್ತು ಸೇವೆಗಳಿಗೆ ಬೇರೆ ಬೇರೆ ನಂಬರ್ ಗಳನ್ನು ನಿಗದಿಪಡಿಸಲಾಗಿತ್ತು.ಇದರಿಂದ ತುರ್ತು ಸಂದರ್ಭಗಳಲ್ಲಿ ಜನರಿಗೆ ಗೊಂದಲಗಳು ಕೂಡ ಉಂಟಾಗುತ್ತಿದ್ದವು. ಇದೀಗ ಈ ಸಮಸ್ಯೆಗಳನ್ನು ನಿವಾರಿಸಲು ಎಲ್ಲಾ ಸೇವೆಗಳನ್ನು 112 ನಂಬರ್ ಅಡಿಯಲ್ಲಿ ಲಭ್ಯವಾಗಲಿದೆ.