ನವದೆಹಲಿ: ಎಲ್ಲಾ ವಿಧದ ಜಾತಿ ಆಧಾರಿತ ಮೀಸಲಾತಿಗಳು ಅಳಿದು, ಆರ್ಥಿಕ ಮೀಸಲಾತಿ ಮಾತ್ರವೇ ಬಾಕಿಯಾಗಲಿದೆ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.
ಮಂಡಲ್ ಪ್ರಕರಣದ ಸುಪ್ರೀಮ್ ಕೋರ್ಟ್ ವಿಧಿಯನ್ನು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಾದವನ್ನು ಆಲಿಸುವ ವೇಳೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ ಭವಿಷ್ಯವಾಣಿಯನ್ನು ನುಡಿದಿದೆ.
ಈ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುವುದು ಸಂಸತ್ತು ಎಂದೂ ಅದು ಅಭಿಪ್ರಾಯಪಟ್ಟಿದೆ.