ಅಹಮದಾಬಾದ್(11/10/2020): ಕಳೆದ ವರ್ಷ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಐವರು ಶಾಸಕರಿಗೆ ಈ ಬಾರಿ ಬಿಜೆಪಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಇವರು ಈ ವರ್ಷದ ಆರಂಭದಲ್ಲಿ ರಾಜ್ಯ ಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿ ನಾಲ್ಕು ರಾಜ್ಯಸಭೆ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು.
ನವೆಂಬರ್ 3ರಂದು ಗುಜರಾತ್ನ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಅಬ್ದಾಸ್, ಲಿಂಬ್ಡಿ, ಮೊರ್ಬಿ, ಧಾರಿ, ಗದ್ದಡ(ಎಸ್ಸಿ), ಕರ್ಜನ್, ದಂಗ್ಸ್ (ಎಸ್ಟಿ), ಕಪ್ರದಾ (ಎಸ್ಟಿ) ಈ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ಪ್ರದ್ಯುಮ್ನಿಶ್ ಜಡೇಜಾ, ಬ್ರಿಜೇಶ್ ಮೆರ್ಜಾ, ಜೆ ವಿ ಕಾಕಾಡಿಯಾ, ಅಕ್ಷಯ್ ಪಟೇಲ್, ಮತ್ತು ಜಿತು ಚೌಧರಿ ಅವರು ಸದ್ಯ ಅವರವರ ಕ್ಷೇತ್ರಗಳಿಂದಲೇ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಜ್ಯಸಭೆ ಚುನಾವಣೆ ವೇಳೆ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.