ಹೈದರಾಬಾದ್(04-12-2020): ಹೈದರಾಬಾದ್ ಸ್ಥಳೀಯ ಚುನಾವಣೆ ಮತಗಳ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.
ಚುನಾವಣೆಯ ಮೊದಲು ಉನ್ನತ ಮಟ್ಟದ ಅಭಿಯಾನಕ್ಕೆ ಸಾಕ್ಷಿಯಾಗಿದ್ದರೂ, ಡಿಸೆಂಬರ್ 1 ರಂದು ಮತದಾನವು ಒಟ್ಟು 74.67 ಲಕ್ಷ ಮತದಾರರಲ್ಲಿ 46.55 ಶೇಕಡಾ (34.50 ಲಕ್ಷ) ರಷ್ಟು ದಾಖಲಾಗಿತ್ತು.
ವರದಿಗಳ ಪ್ರಕಾರ, ಬಿಜೆಪಿ 69 ವಿಭಾಗಗಳಲ್ಲಿ ಆರಂಭಿಕ ಮುನ್ನಡೆಗಳನ್ನು ಸಾಧಿಸಿದೆ ಮತ್ತು ಟಿಆರ್ಎಸ್ 31 ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದೆ.
30 ಸ್ಥಳಗಳಲ್ಲಿ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಎಣಿಕೆಯಲ್ಲಿ ತೊಡಗಿರುವ ಒಟ್ಟು ಸಿಬ್ಬಂದಿ ಸಂಖ್ಯೆ 8,152 ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರತಿ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸಂಪೂರ್ಣ ಎಣಿಕೆಯ ಪ್ರಕ್ರಿಯೆಯನ್ನು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನಕ್ಕಾಗಿ ಮತಪತ್ರಗಳನ್ನು ಬಳಸಲಾಗಿತ್ತು ಇದರ ಪರಿಣಾಮವಾಗಿ, ಫಲಿತಾಂಶಗಳು ಸಂಜೆ ಅಥವಾ ತಡರಾತ್ರಿಯಲ್ಲಿ ಮಾತ್ರ ತಿಳಿಯುವ ಸಾಧ್ಯತೆಯಿದೆ.
ಜಿಎಚ್ಎಂಸಿಯಲ್ಲಿನ ಒಟ್ಟು 150 ವಾರ್ಡ್ಗಳಲ್ಲಿ ಡಿಸೆಂಬರ್ 1 ರಂದು 149 ವಾರ್ಡ್ಗಳಿಗೆ ಮತದಾನ ನಡೆದಿದ್ದು, ಗುರುವಾರ ಒಂದು ವಾರ್ಡ್ನಲ್ಲಿ (ಓಲ್ಡ್ ಮಲಕ್ಪೇಟೆ) ಹೊಸ ಮತದಾನ ನಡೆಸಲಾಯಿತು.