ಬೆಂಗಳೂರು 01/11/2020: ನವಂಬರ್ 3ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದೆ. ಕೋವಿಡ್ 19 ಬಳಿಕ ಇದು ಮೊದಲ ಮತದಾತವಾಗಿದೆ. ಚುನಾವಣಾ ಆಯೋಗದ ಸಿಬ್ಬಂದಿ ಕಲೆ ಹಾಕಿರುವ ಗುರುತಿಸಿರುವ ಪ್ರಕಾರ ಈ ಕ್ಷೇತ್ರದಲ್ಲಿ 148 ಮತದಾರರು ಕೋವಿಡ್ ಹೊಂದಿರುವುದು ದೃಢಪಟ್ಟಿದೆ. ವಿಶೇಷವೆಂದರೆ, ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮತದಾನದ ಸಿದ್ಧತೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ಹಾಗೂ ನಗರದ ಪೊಲೀಸ್ ಕಮಿಷನರ್ ಕಮಲಪಂಥ್ ಸುದ್ದಿಗಾರರಿಗೆ ಭಾನುವಾರ ಮಾಹಿತಿ ನೀಡಿದರು.
‘ಕೋವಿಡ್ ಸೋಂಕಿತರು ಕೊನೆಯ 1 ಗಂಟೆಯಲ್ಲಿ ಮತ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಅವರನ್ನು ಮತಗಟ್ಟೆಗೆ ಕರೆ ತರಲು 90 ಆ್ಯಂಬುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಉಚಿತವಾಗಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್) ಒದಗಿಸಲಿದ್ದೇವೆ’ ಎಂದರು.