ಮಾದ್ಯಮಗಳ ಮುಂದೆ ಜ್ಯೋತಿಷ್ಯ ಹೇಳುವಂತಿಲ್ಲ| ಸುಳ್ಳು ಭವಿಷ್ಯಗಳಿಗೆ ಬ್ರೇಕ್

election comission
Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರ(16-10-2020): ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿದ್ದು, ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಮತ್ತು ಟ್ಯಾರೋ ರೀಡರ್ ಗಳು ಚುನಾವಣಾ ಭವಿಷ್ಯ ಹೇಳಬಾರದು ಎಂದು ನಿರ್ಬಂಧ ವಿಧಿಸಿದೆ.

ಕೇಂದ್ರ ಚುನಾವಣಾ ಆಯೋಗ ಈ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿ ಸೂಚನೆ ನೀಡಿದ್ದು, ಚುನಾವಣೆವರೆಗೂ ಜ್ಯೋತಿಷಿಗಳು ಅಥವಾ ವಿಶ್ಷೇಷಕರು ಮಾಧ್ಯಮಗಳ ಪ್ಯಾನಲ್ ಗಳಲ್ಲಿ ಕುಳಿತುಕೊಂಡು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಾವ ವ್ಯಕ್ತಿ ಗೆಲ್ಲುತ್ತಾನೆ ಎಂದು ಹೇಳಬಾರದು ಇದು ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ.ಅಂತಹ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದೆ.

 ಚುನಾವಣೆ ಬಂತೆಂದರೆ ಜೋತಿಷ್ಯಗಳು ಈ ಮೊದಲು ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿರುವುದನ್ನು ನಾವು ಕಂಡಿದ್ದೇವೆ. ಈ ಬಾರಿಯ ಚುನಾವಣಾ ನೀತಿ ಸಂಹಿತೆ ಅನ್ವಯ ಈ ರೀತಿ ಹೇಳಿದರೆ ಅಪರಾಧವಾಗುತ್ತದೆ.

ಬಿಹಾರ ವಿಧಾನಸಭಾ ಚುನಾವಣೆ ಅ. 28ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶ ನ.10 ರಂದು ಪ್ರಕಟವಾಗಲಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು